×
Ad

ಆಧುನಿಕ ಪ್ರವೃತ್ತಿ ಜೊತೆ ವಿದ್ಯಾಭ್ಯಾಸ ನಡೆಸಿ: ಡಾ. ಚಂದ್ರಶೇಖರ್ ಕರೆ

ಪಿ. ಎ ಕಾಲೇಜಿನ ಎಂ. ಬಿ. ಎ ವಿದ್ಯಾರ್ಥಿ ವೇದಿಕೆ "ಇಗ್ನೈಟ್ 2023-24" ಉದ್ಘಾಟನೆ

Update: 2023-02-14 23:44 IST

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಪಿ. ಎ ಕಾಲೇಜ್, ಮಂಗಳೂರು ಇದರ ವಿದ್ಯಾರ್ಥಿ ವೇದಿಕೆ  ಇಗ್ನೈಟ್   (ignite)ನ ಉದ್ಘಾಟನಾ ಕಾರ್ಯಕ್ರಮ  ಪೇಸ್ ಕ್ಯಾಂಪಸ್ ನಲ್ಲಿ  ನಡೆಯಿತು.

ಮಂಗಳೂರು ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಕೆ ಆರ್ ಉದ್ಘಾಟಯನ್ನು  "ಇಗ್ನೈಟ್ ವಿಷನ್ ಬೋರ್ಡ್ 2023-24" ಸಂಯೋಜಕಿ ಪ್ರೊ. ಶಮಾರಿಗೆ ಹಸ್ತಾಂತರಿಸುವ ಮೂಲಕ ನೆರೆವರಿಸಿ ಮಾತನಾಡುತ್ತ ಆಧುನಿಕ ಪ್ರವೃತ್ತಿ ಜೊತೆ ವಿದ್ಯಾಭ್ಯಾಸ ನಡೆಸಿ ಯಶಸ್ಸು ಪಡೆಯಿರಿ ಎಂದು  ಕರೆ ನೀಡಿದರು.

ಪ್ರೊ.ಶಮಾ ಇಗ್ನೈಟ್ 2023-24ರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ನ ನಿರ್ದೇಶಕ  ಹಾಗು ಪಿ .ಎ  ಸಮೂಹ ಸಂಸ್ಥೆಗಳ  ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ . ಸಯ್ಯದ್ ಅಮೀನ್ ಅಹಮ್ಮದ್ ಮಾತನಾಡಿ,  ಇಗ್ನೈಟ್ ನ ವಿವಿಧ ಸಮಿತಿಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿ ಅದರ ಮಹತ್ವ ಕುರಿತು ಮಾಹಿತಿ ನೀಡಿದರು. ಪ್ರೊ. ಇಸ್ಮಾಯಿಲ್ ಶಾಫಿ ಶುಭ ಹಾರೈಸಿದರು. ಶರ್ಫುದ್ದಿನ್ ಪಿ ಕೆ, ಡಾ.  ಝೋಹೇಬ್  ಆಲಿ, ಪ್ರೊ. ಇಕ್ಬಾಲ್ ವೇದಿಕೆಯಲ್ಲಿ ಉಸ್ಥಿತರಿದ್ದರು.  

ಕು.ಫಾತಿಮತ್ ನೌರ  ಸ್ವಾಗತಿಸಿ, ಕು. ಲನ್ವಿಟ ಕುಟಿನ ವಂದಿಸಿದರು. ಕು. ಆಫ್ಜ ನಾಝ್ ನಿರ್ವಹಿಸಿದರು.

Similar News