×
Ad

ಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್ ನಿಧನ

Update: 2023-02-20 09:15 IST

ಬೆಂಗಳೂರು, ಫೆ.20: ಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್(90) ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 ರವೀಂದ್ರ ಕಲಾಕ್ಷೇತ್ರದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗುತ್ತಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊರೈ-ಭಗವಾನ್ ಜೋಡಿ ಭಾರೀ ಹೆಸರಾಗಿತ್ತು. ದೊರೈ ರಾಜ್ ಅವರು 2000ರಲ್ಲಿ ನಿಧನರಾಗಿದ್ದರು. ಈ ಜೋಡಿ ಒಟ್ಟಿಗೆ 27 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಡಾ ರಾಜಕುಮಾರ್​ಗೆ ಅತಿ ಹೆಚ್ಚು ಸಿನೆಮಾಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಎಂಬ ಹೆಗ್ಗಳಿಕೆ ಭಗವಾನ್ ಅವರದ್ದಾಗಿದೆ. ಈ ಪೈಕಿ ಬಹುತೇಕ ಸಿನೆಮಾಗಳು ಹಿಟ್ ಆಗಿವೆ.

 ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಆಪರೇಷನ್ ಡೈಮಂಡ್ ರಾಕೆಟ್, ಗಿರಿಕನ್ಯೆ, ಚಂದನದ ಗೊಂಬೆ, ಮುನಿಯನ ಮಾದರಿ, ಹೊಸಬೆಳಕು, ಬೆಂಕಿಯ ಬಲೆ, ಯಾರಿವನು, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ, ಒಡಹುಟ್ಟಿದವರು ಹೀಗೆ ಸಾಕಷ್ಟು ಸಿನೆಮಾಗಳಿಗೆ ಭಗವಾನ್ ನಿರ್ದೇಶನ ಮಾಡಿದ್ದಾರೆ.

Similar News