×
Ad

ಎನ್‍ಪಿಎಸ್ ವಿರುದ್ಧ ಹೋರಾಟ: ಸರಕಾರಕ್ಕೆ ಫೆ.28ರ ವರೆಗೆ ಗಡುವು

Update: 2023-02-22 19:19 IST

ಬೆಂಗಳೂರು, ಫೆ.22: ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಹಾಗೂ 7ನೆ ವೇತನ ಆಯೋಗದಂತೆ ವೇತನ ಪರಿಷ್ಕರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಫೆ.28ರವರೆಗೆ ಸರಕಾರಕ್ಕೆ ಗಡುವು ನೀಡಿದೆ.

ಬುಧವಾರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದಲ್ಲಿ ನಡೆದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದ್ದು, ಈ ಕುರಿತು ಮಾತನಾಡಿರುವ ಷಡಕ್ಷರಿ, ಬಿಜೆಪಿ ಸರಕಾರದ ಬಜೆಟ್‍ನಲ್ಲಿ 7ನೇ ವೇತನ ಆಯೋಗ ಹಾಗೂ ಒಪಿಎಸ್ ಪಿಂಚಣಿ ಯೋಜನೆಯ ಕುರಿತು ರಾಜ್ಯ ಸರಕಾರ ಯಾವುದೇ ರೀತಿಯಲ್ಲಿ ಪ್ರಸ್ತಾಪಿಸಿಲ್ಲ. ಆ ಕಾರಣದಿಂದ ನೌಕರರ ಸಂಘದಿಂದ ಸಭೆ ನಡೆಸಿದ್ದು, ಒಪಿಎಸ್ ಜಾರಿ ಮಾಡುವುದು ಮತ್ತು ವೇತನ ಪರಿಷ್ಕರಣೆ ನಡೆಸುವಂತೆ ಒತ್ತಾಯಿದ್ದೇವೆ. ಒಂದು ವೇಳೆ ಸರಕಾರ ನೌಕರರ ಬೇಡಿಕೆಯನ್ನು ಈಡೇರಿಸದಿದ್ದರೆ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯದ ನೂರಾರು ಸರಕಾರಿ ನೌಕರರು ಭಾಗಿಯಾಗಿದ್ದರು.

Similar News