ಕೆ.ಆರ್.ಪುರಂ-ವೈಟ್‍ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭ

Update: 2023-02-22 15:13 GMT

ಬೆಂಗಳೂರು, ಫೆ.22: ಕೆ.ಆರ್.ಪುರಂ-ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ಇಂದಿನಿಂದ ಟ್ರಯಲ್ ರನ್ ನಡೆಯಲಿದೆ.

ರೈಲ್ವೇ ಸೇಫ್ಟಿ ಆಯುಕ್ತರು ಎರಡ್ಮೂರು ದಿನಗಳ ಕಾಲ ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರದ ಮಾರ್ಗವನ್ನು ಪರಿಶೀಲಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಅವರ ಸಮ್ಮುಖದಲ್ಲೇ ಈ ಭಾಗದ ಮೆಟ್ರೋ ರೈಲು ಸಂಚಾರದ ಟ್ರಯಲ್ ರನ್ ನಡೆಯಲಿದೆ. ಟ್ರ್ಯಾಕ್, ರೈಲಿನ ಸಂಚಾರ, ನಿಲ್ದಾಣಗಳ ಮೇಂಟೆನೆನ್ಸ ಸೇರಿದಂತೆ ಹಲವಾರು ಮಾದರಿಯ ಸುರಕ್ಷತೆ ಮತ್ತು ವ್ಯವಸ್ಥೆ ಬಗ್ಗೆ ಮೂರು ದಿನಗಳ ಕಾಲ ಹೊಸ ಮಾರ್ಗದ ಪರಿಶೀಲನೆ ನಡೆಸಲಿರೋ ಸೇಫ್ಟಿ ಕಮಿಷನರ್ ಅವರು ಒಂದು ವಾರದ ಬಳಿಕ ಸಂಪೂರ್ಣ ವರದಿ ಸಲ್ಲಿಕೆ ಮಾಡಲಿದ್ದಾರೆ.

ಅವರು ನೀಡುವ ವರದಿಯಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಾರದಿದ್ದರೆ ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆಯಲಿದೆ. ರೈಲ್ವೇ ಸೇಫ್ಟಿ ಆಯುಕ್ತರ ವರದಿ ಆಧಾರದಲ್ಲಿ ರಾಜ್ಯ ಸರಕಾರ ಕೆ.ಆರ್.ಪುರಂ-ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ದಿನಾಂಕ ನಿಗದಿ ಮಾಡಲಿದೆ. 

Similar News