×
Ad

ಮುನಾಜಾತ್ ಮಜ್ಲಿಸ್: ಸ್ವಾಗತ ಸಮಿತಿ ರಚನೆ

Update: 2023-02-22 23:16 IST

ಉಳ್ಳಾಲ: ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಮ್ ಅಕಾಡಮಿಯ ವಾರ್ಷಿಕ  ಸಮ್ಮೇಳನವು ಮಾ.12ರಂದು  ನಾಟೆಕಲ್ ಸಮೀಪದ ಮಂಗಳ ನಗರ ಜಾಮಿಯಾ ಮಸ್ಜುದುನ್ನೂರ್ ಮಸೀದಿ ವಠಾರದಲ್ಲಿ ಮುನಾಜಾತ್ ಮಜ್ಲಿಸ್‌ನೊಂದಿಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಾಮಿಯಾ ದಾರುಸ್ಸಲಾಮ್‌ನ ಕುಲಪತಿ ಶೈಖುನಾ ಎವಿ ಉಸ್ತಾದ್ ಹಾಗೂ ಅಸ್ಸೆಯ್ಯದ್ ಅಲಿ ತಂಙಳ್ ಕುಂಬೋಳ್ ಭಾಗವಹಿಸಲಿದ್ದಾರೆ. ಸಮ್ಮೇಳನದ ಯಶಸ್ವಿಗೆ ಸಂಸ್ಥೆಯ ಅಧ್ಯಕ್ಷ ಮೌಲಾನಾ ಯುಕೆ ದಾರಿಮಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಅಬ್ಬಾಸ್ ಮುಸ್ಲಿಯಾರ್ ಮಂಗಳನಗರ, ಸಲಹೆಗಾರರಾಗಿ ಶೈಖುನಾ ಏವಿ ಉಸ್ತಾದ್, ಶೈಖುನಾ ತ್ವಾಖಾ ಉಸ್ತಾದ್, ಉಸ್ಮಾನ್ ಫೈಝಿ, ತಬೂಕ್ ಅಬ್ದುಲ್ ರಹಿಮಾನ್ ದಾರಿಮಿ, ಎಸ್.ಬಿ. ಮುಹಮ್ಮದ್ ದಾರಿಮಿ, ರಕ್ಷಾಧಿಕಾರಿಗಳಾಗಿ ಮೌಲಾನಾ ಯು.ಕೆ.  ಅಝೀಝ್ ದಾರಿಮಿ, ಕೆ.ಬಿ. ಅಬ್ದುಲ್ ಖಾದರ್ ದಾರಿಮಿ, ಮೊಯಿದಿನ್ ಬಾವುಚ್ಚ, ವೈಸ್ ಚೇರ್ಮನ್‌ಗಳಾಗಿ ಶೇಖ್  ಸಿದ್ದೀಕ್ ಅಬ್ಬಾಸ್, ಜಮಾಲುದ್ದೀನ್ ಕಿನ್ಯ, ಎನ್.ಎ.ಅಶ್ರಫ್, ಅಶ್ರಫ್ ಮರಾಠಿಮೂಲೆ. ಮುಖ್ಯ ಕನ್ವಿನರ್‌ರಾಗಿ ಲತೀಫ್ ದಾರಿಮಿ ರೆಂಜಾಡಿ, ಸಹ ಕನ್ವಿನರ್‌ಗಳಾಗಿ  ಇಸ್ಮಾಯಿಲ್ ಪಡ್ಪು, ಬಶೀರ್ ಮಂಗಳನಗರ, ಖಜಾಂಚಿ ಸಿಎಚ್ ಮುಹಮ್ಮದ್, ಸಂಚಾಲಕರಾಗಿ ಹನೀಫ್ ದಾರಿಮಿ ಹಾಗೂ ೩೩ ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

Similar News