ಉಳ್ಳಾಲ ದರ್ಗಾ-ಜುಮಾ ಮಸ್ಜಿದ್ ಆಡಳಿತ ಸಮಿತಿಗೆ ಚುನಾವಣೆ: ಶೇ.86.6 ಮತದಾನ

Update: 2023-02-25 11:17 GMT

ಮಂಗಳೂರು: ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಆಡಳಿತ ಸಮಿತಿಗೆ ಇಂದು ಶಾಂತಿಯುತ ಚುನಾವಣೆ ನಡೆದಿದ್ದು, ಶೇ. 86.6 ಮತದಾನವಾಗಿದೆ.

ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ ಮುಕ್ಕಚೇರಿ-ಒಂಭತ್ತುಕೆರೆಯ ದ.ಕ. ಜಿಪಂ ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ 8ರಿಂದ ಅಪರಾಹ್ನ 3ರವರೆಗೆ ಚುನಾವಣೆ ನಡೆಯಿತು. 3512 ಮತದಾರರ ಪೈಕಿ 2935 ಮಂದಿ ಮತದಾನ ಮಾಡಿದ್ದಾರೆ.

ಈಗಾಗಲೆ ಮತಎಣಿಕೆ ಆರಂಭಗೊಂಡಿದ್ದು, ಇಂದು ಮುಸ್ಸಂಜೆಯೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.

Similar News