×
Ad

ಬೆಂಗಳೂರು: ವಾಟರ್ ಹೀಟರ್‌ನಿಂದ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಮೃತ್ಯು

Update: 2023-02-27 22:56 IST

ಬೆಂಗಳೂರು,ಫೆ.27: ವಾಟರ್ ಹೀಟರ್‌ನಿಂದ ವಿದ್ಯುತ್ ಸ್ಪರ್ಶಿಸಿ ತಾಯಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಕನಕನಗರದಲ್ಲಿ ನಡೆದಿದೆ.

ತಾಯಿ ಜ್ಯೋತಿ ಹಾಗೂ ಆಕೆಯ 4 ವರ್ಷದ ಮಗು ಜಯಾನಂದ್  ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಾಯಚೂರು ಮೂಲದ ಜ್ಯೋತಿ ತನ್ನ ಗಂಡ ಹಾಗೂ ಮಗನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕನಕನಗರದಲ್ಲಿ ನೆಲೆಸಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

ರವಿವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದ ವಾಟರ್ ಹೀಟರ್‌ನಿಂದ ಬಾಲಕ ಜಯಾನಂದ್‌ಗೆ ವಿದ್ಯುತ್ ಶಾಕ್ ತಗುಲಿತ್ತು. ಮಗುವಿಗೆ ಶಾಕ್ ತಗುಲಿ ಒದ್ದಾಡುತ್ತಿರುವುದನ್ನು ಕಂಡ ಜ್ಯೋತಿ ಆತನನ್ನು ಕಾಪಾಡಲು ಮುಂದಾದಾಗ ಆಕೆಗೂ ವಿದ್ಯುತ್ ಸ್ಪರ್ಶವಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Similar News