ಮಾ.4ರಂದು ಹೊನ್ನಾಳದಲ್ಲಿ ಸುನ್ನಿ ಇಜ್ತೀಮಾ
ಉಡುಪಿ, ಮಾ.1: ಸುನ್ನಿ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸುನ್ನಿ ಇಜ್ತೀಮಾವನ್ನು ಮಾ.4ರಂದು ಹೊನ್ನಾಳದ ಜಾಮಿಯ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 5.30ರಿಂದ 6.30ರ ತನಕ ವಿದ್ಯಾರ್ಥಿಗಳಿಗೆ ಕೀ ಟು ಸಕ್ಸೆಸ್ ಎಂಬ ವಿಷಯದ ಕುರಿತು ಇಸ್ಲಾಮಿಕ್ ತರಬೇತುದಾರ ಮುಂಬೈ ಹಾಶ್ಮಿಯಾ ಹೈಸ್ಕೂಲ್‌ನ ಪ್ರಾಂಶುಪಾಲ ಬುಲ್ ಬುಲೇ ಭಾಗೇ ಮದೀನಾ ಖಾರಿ ರಿಜ್ವಾನ್ ಖಾನ್ ಉಪನ್ಯಾಸ ನೀಡಲಿರುವರು. ಸಂಜೆ 7 ಗಂಟೆಯಿಂದ 8.30ರ ತನಕ ದಾರುಲ್ ಮುಸ್ತಫಾ ಮೊರಲ್ ಅಕಾಡೆಮಿ ಪ್ರಾಂಶುಪಾಲ ಮೊಹಿಯುದ್ದಿನ್ ಕಾಮಿಲ್ ಸಖಾಫಿ ತೊಕೆ ಸತ್ಯದ ಸಂದೇಶ ವಿಷಯದ ಕುರಿತು ಪ್ರಭಾಷಣ ನೀಡಲಿದ್ದಾರೆ.
ರಾತ್ರಿ 9 ಗಂಟೆಯಿಂದ 10.30ರವರೆಗೆ ಮುಂಬೈ ರುಕ್ನೇ ಮಜ್ಲೀಸೆ ಶುಅರಾ ಸುನ್ನಿ ದಾವತೇ ಇಸ್ಲಾಮಿ ಖಾರಿ ರಿಝ್ವಾನ್ ಖಾನ್ ಮಕ್ಕಳ ನೈತಿಕ ಮತ್ತು ಸಮಾಜಿಕ ಸುಧಾರಣೆಯಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿಗಳು ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಸುನ್ನಿ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.