×
Ad

ಮಂಗಳೂರು: ಏರ್‌ಗನ್ ತೋರಿಸಿ ಬೆದರಿಕೆ ಆರೋಪ; ದೂರು

Update: 2023-03-02 23:47 IST

ಮಂಗಳೂರು: ಅಕ್ಕಪಕ್ಕದ ಮನೆಯವರ ಮಧ್ಯೆ ನಡೆದ ಗಲಾಟೆಯು ತಾರಕಕ್ಕೇರಿದ ಪರಿಣಾಮ ವ್ಯಕ್ತಿಯೊಬ್ಬ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು, ಕಾವೂರು ಠಾಣೆಗೆ ದೂರು ನೀಡಲಾಗಿದೆ. 

ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯ ಎದುರು ಪದವಿನ ರಾಜೇಶ್ ಎಂಬಾತ ಕುಡಿದ ಮತ್ತಿನಲ್ಲಿ ಯುವತಿಯನ್ನು‌ ನಿಂದಿಸಿದ್ದಾನೆ ಎನ್ನಲಾಗಿದ್ದು, ಇದೇ ವಿಷಯದಲ್ಲಿ ಎರಡು ಮನೆಯ ನಿವಾಸಿಗಳು ಗುರುವಾರ ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಆರೋಪಿ ರಾಜೇಶ್ ಏರ್ ಗನ್ ತೋರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಕೂಡಲೇ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.
ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News