×
Ad

ಹೆಜಮಾಡಿ ಸೇತುವೆ ಬಳಿ ರಸ್ತೆ ಅಪಘಾತ; ತೀರ್ಥಹಳ್ಳಿ ಮುಸ್ಲಿಂ ಒಕ್ಕೂಟದ ನಿರ್ದೇಶಕ, ಪತ್ನಿ ಸ್ಥಳದಲ್ಲೇ ಮೃತ್ಯು

Update: 2023-03-07 15:57 IST

ಪಡುಬಿದ್ರಿ, ಮಾ.7: ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ತೀರ್ಥಹಳ್ಳಿಯ ದಂಪತಿ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ಹೆಜಮಾಡಿ ಸೇತುವೆ ಬಳಿ ನಡೆದಿದೆ.

ಮೃತರನ್ನು ತೀರ್ಥಹಳ್ಳಿ ತಾಲೂಕು ಮುಸ್ಲಿಂ ಒಕ್ಕೂಟದ ನಿರ್ದೇಶಕರಾದ ಅಕ್ಬರ್ ಪಾಷಾ ಹಾಗೂ ಅವರ ಪತ್ನಿ ಖತೀಜ ಎಂದು ಗುರುತಿಸಲಾಗಿದೆ. ಪಾಸ್‌ಪೋರ್ಟ್ ಕಚೇರಿಗೆ ಹೋಗಲೆಂದು ತೀರ್ಥಹಳ್ಳಿಯಿಂದ ಮಂಗಳೂರು ಕಡೆಗೆ ಸಂಚರಿಸುತಿದ್ದಾಗ ಈ ಅಪಘಾತ ನಡೆದಿದೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Similar News