ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಹೊತ್ತಿ ಉರಿದ ಗುಡ್ಡ

Update: 2023-03-07 15:29 GMT

ಜಾಲ್ಸೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಗುಡ್ಡಕ್ಕೆ ಬೆಂಕಿ ತಗುಲಿ ಹಲವು ಏಕರೆ ಪ್ರದೇಶ ಹೊತ್ತಿ ಉರಿದ ಘಟನೆ ಸೋಮವಾರ ಸಂಜೆ ಘಟಿಸಿದೆ.

ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಬಳಿಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿದ ಪರಿಣಾಮವಾಗಿ ಬೆಂಕಿಯ ಕಿಡಿ ಒಣಗಿದ ತರಗೆಲೆಗೆ ಬಿದ್ದು, ಹಲವಾರು ಪ್ರದೇಶಗಳನ್ನು ವ್ಯಾಪಿಸಿ ಹೊತ್ತಿ ಉರಿಯತೊಡಗಿತು. ಇದನ್ನು ಕಂಡ ಸ್ಥಳೀಯರು ಸೇರಿ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು.

ಸುಳ್ಯದ ಅಗ್ನಿಶಾಮಕ ಠಾಣೆಯ ವಾಹನ ಇದೇ ವೇಳೆಯಲ್ಲಿ ನಿಂತಿಕಲ್ಲಿನಲ್ಲಿ ಸಂಭವಿಸಿದ ಬೆಂಕಿಯನ್ನು ನಂದಿಸಲು ತೆರಳಿದ್ದ ಕಾರಣ ತಕ್ಷಣ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ. ಸುಳ್ಯ ಅಗ್ನಿಶಾಮಕ ಠಾಣೆಯವರು ಪುತ್ತೂರಿನ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ ಕಾರಣದಿಂದ ಪುತ್ತೂರಿನಿಂದ ಅಗ್ನಿಶಾಮಕ ವಾಹನ ಜಾಲ್ಸೂರಿಗೆ ಬಂದು ಬೆಂಕಿ ನಂದಿಸಲು ಕಾರ್ಯಚಣೆಗಿಳಿಯಿತು. ಅಗ್ನಿಶಾಮಕ ವಾಹನ ಬರುವ ವೇಳೆಗೆ ಬೆಂಕಿಯ ಕೆನ್ನಾಲಗೆ ಸುಮಾರು ಪ್ರದೇಶಕ್ಕೆ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ.

Similar News