7 ಕಾಲೇಜುಗಳಲ್ಲಿ ಬಿ.ಎಡ್ ಕೋರ್ಸ್‍ಗೆ ಸೇರದಂತೆ ಬೆಂಗಳೂರು ವಿವಿ ಎಚ್ಚರಿಕೆ

Update: 2023-03-07 17:56 GMT

ಬೆಂಗಳೂರು, ಮಾ.7: ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಸೈಂಟ್ ಸ್ಟೀಫನ್ಸ್ ಟೀಚರ್ಸ್ ಕಾಲೇಜು ಸೇರಿ ಏಳು ಬಿ.ಎಡ್ ಕಾಲೇಜುಗಳಿಗೆ 2022-23ನೆ ಸಾಲಿಗೆ ಸಂಯೋಜನೆ ನೀಡದ ಕಾರಣ ಈ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಬಾರದು ಎಂದು ವಿವಿಯು ಪ್ರಕಟನೆಯನ್ನು ಹೊರಡಿಸಿದೆ.

ಸೈಂಟ್ ಸ್ಟೀಫನ್ಸ್ ಟೀಚರ್ಸ್ ಕಾಲೇಜು, ಜಿ.ಕೆ.ಎಂ. ಬಿ.ಎಡ್ ಕಾಲೇಜು, ಪ್ರಗತಿ ಕಾಲೇಜು ಆಫ್ ಎಜುಕೇಷನ್, ನೇತಾಜಿ ಕಾಲೇಜ್ ಆಫ್ ಎಜುಕೇಷನ್, ಅಮಿತ ಬಿ.ಎಡ್. ಕಾಲೇಜು, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಜಿ.ಎಂ. ಶಿಕ್ಷಣ ಕಾಲೇಜುಗಳಲ್ಲಿ ಬಿ.ಎಡ್ ಕೋರ್ಸ್‍ಗೆ ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆಯಬಾರದು ಎಂದು ವಿವಿ ಎಚ್ಚರಿಕೆ ನೀಡಿದೆ.

Similar News