ಕಾಪು : ಸಮುದ್ರ ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2023-03-09 15:35 GMT

ಕಾಪು: ಸಮುದ್ರ ಕಿನಾರೆಯಲ್ಲಿ ಟ್ಯೂಬ್ ಧರಿಸಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರ ಪಾಲಾಗಿದ್ದ ವ್ಯಕ್ತಿಯ ಮೃತದೇಹ ಗುರುವಾರ ಮಧ್ಯಾಹ್ನ ಪೊಲಿಪು ಬಳಿ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

ಮೃತವ್ಯಕ್ತಿಯನ್ನು ಕಾಪುವಿನ ಯಾರ್ಡ್ ಬಳಿ ನಿವಾಸಿ ಸಂತೋಷ್ (45) ಗುರುತಿಸಲಾಗಿದೆ. ಬುಧವಾರ ಸಂಜೆ ಉಳಿಯರಗೋಳಿ ಸಮುದ್ರ ಕಿನಾರೆಯಲ್ಲಿ ಟ್ಯೂಬ್ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಬಲೆ ಬೀಸಿ, ವಾಪಸ್ಸಾಗುತ್ತಿದ್ದ ವೇಳೆ ತೆರೆಯ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿದ್ದರು. ಸ್ಥಳೀಯರು ಗಮನಿಸಿ ಕೂಡಲೇ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರಾದರೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಮುಳುಗು ತಜ್ಣ ಈಶ್ವರ್ ಮಲ್ಪೆ ಸೇರಿದಂತೆ ರಕ್ಷಣಾ ತಂಡವು ರಾತ್ರಿಯವರೆಗೂ ಸಂತೋಷ್ ಅವರ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು.

ಗುರುವಾರ ಮಧ್ಯಾಹ್ನ ಪೊಲಿಪು ಬಳಿಯ ಸಮುದ್ರ ತೀರದಲ್ಲಿ ಶವ ತೇಲಿಕೊಂಡು ಬಂದಿದ್ದು ಸ್ಥಳೀಯ ಮೀನುಗಾರರು ಮೃತದೇಹವನ್ನು ಮೇಲಕ್ಕೆತ್ತಿ ತಂದು ಪರಿಶೀಲಿಸಿದಾಗ ಅದು ಸಂತೋಷ್ ಅವರ ಮೃತದೇಹ ವೆಂದು ಗುರುತಿಸಲಾಯಿತು.

ಮೃತ ಸಂತೋಷ್ ಪತ್ನಿ, ಮಗಳು ಮತ್ತು ಸಹೋದರಿಯರನ್ನು ಅಗಲಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Similar News