×
Ad

ಮಂಗಳೂರು: ನಕಲಿ ಪೊಲೀಸ್ ನಿಂದ ಹಣ ವಸೂಲಿ; ಆರೋಪ

Update: 2023-03-10 23:17 IST

ಮಂಗಳೂರು, ಮಾ.10: ನಗರದ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಹಿಳೆಯನ್ನು ಹೆದರಿಸಿ ಹಣ ವಸೂಲಿ ಮಾಡಿರುವುದಾಗಿ ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಮಹಿಳೆಯು ಈ ಹಿಂದೆ ಮಸಾಜ್ ಪಾರ್ಲರ್ ನಡೆಸಿಕೊಂಡಿದ್ದರು ಎನ್ನಲಾಗಿದೆ. ಈ ಮಹಿಳೆಯ ಬಳಿ ವ್ಯಕ್ತಿಯೊಬ್ಬ ತಾನು ಪೊಲೀಸ್ ಎಂದು ಹೇಳಿಕೊಂಡು "ನೀವು ಅಕ್ರಮ ಚಟುವಟಿಕೆ ಮಾಡುತ್ತಿದ್ದೀರಿ. ಅದನ್ನು ಮುಚ್ಚಿ ಹಾಕಲು ಹಣ ನೀಡಬೇಕು" ಎನ್ನುತ್ತಾ ಗೂಗಲ್ ಪೇ ಮೂಲಕ ಬುಧವಾರ ಮತ್ತು ಗುರುವಾರ ಒಟ್ಟು 38,000 ರೂ. ವರ್ಗಾಯಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯು ಪೊಲೀಸರ ಸಮವಸ್ತ್ರದಲ್ಲಿ ಮಹಿಳೆಯ ಮನೆಗೆ ಹೋಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ‌.

Similar News