×
Ad

ಎಡಿಸಿ ಪ್ರೊಜೆಕ್ಟ್‌: ಪಿ.ಎ. ಇಂಜಿನಿಯರಿಂಗ್‌ ಕಾಲೇಜಿಗೆ ಪ್ರಥಮ ಬಹುಮಾನ

Update: 2023-03-11 21:28 IST

ಮಂಗಳೂರು, ಮಾ.11: ಪಿಎ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸಿಎಸ್‌ಇ ವಿಭಾಗದ ಎಂಬೆಡ್ ಕ್ಲಬ್ ಅನ್ನು ಪ್ರತಿನಿಧಿಸುವ ಫ್ಲೈ ಗರ್ಲ್ - ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ತಮ್ಮ ವಿನೂತನ ಯೋಜನೆಗಾಗಿ ಸಿಎಸ್‌ಇ 3ನೇ ವರ್ಷದ ವಿದ್ಯಾರ್ಥಿನಿಯರಾದ ರಿಫಾ, ಶಬ್ನಾಜ್, ಆಯಿಶಾ ದಾನಿಯಾ ಮತ್ತು ಸುಮಯ್ಯಾ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಇನ್ನೊಂದು ಯೋಜನೆಯಾದ ಬೀಜೆನ್- ಜೇನುನೊಣಗಳ ಬಗ್ಗೆ ರೈತರಿಗೆ ನೈಜ ಸಮಯದ ಮಾಹಿತಿಯನ್ನು ಒದಗಿಸುವ ಮತ್ತು ಅವರ ಕೃಷಿಯನ್ನು ಹೆಚ್ಚಿಸುವುದಕ್ಕಾಗಿ ಸಿಎಸ್‌ಇ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜೌಹರ್ ಮತ್ತು ಇಮಾದ್  ಮತ್ತು 3ನೇ ವರ್ಷದ ಮುಆದ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಎಡಿಸಿಯು-ಎಸಿಸಿಎಸ್ ಮತ್ತು ಐಐಐಟಿ ಬೆಂಗಳೂರು ಸಹಯೋಗದಲ್ಲಿ ಜಂಟಿಯಾಗಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಯೋಜನಾ ಸ್ಪರ್ಧೆ ಇದಾಗಿದೆ. ಐಐಟಿ ಮತ್ತು ಎನ್‌ಐಟಿಯೊಂದಿಗೆ ಸ್ಪರ್ಧಿಸುವ ಏಕೈಕ ವಿಟಿಯು ಕಾಲೇಜು ಎಂಬ ಖ್ಯಾತಿಗೆ ಪಿ.ಎ. ಕಾಲೇಜ್ ಆಫ್ ಇಂಜನಿಯರಿಂಗ್ ಪಾತ್ರವಾಗಿದೆ. 2018ರಿಂದ ಈ ಸ್ಪರ್ಧೆಯಲ್ಲಿ ಎಂಬೆಡ್ ಕ್ಲಬ್‌ನ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News