ಮಾ.19ರಂದು ಪೇರಡ್ಕದಲ್ಲಿ ನೂರೇ ಅಜ್ಮೀರ್ ಮಜ್ಲಿಸ್ ಕಾರ್ಯಕ್ರಮ

Update: 2023-03-11 16:40 GMT

ಪೇರಡ್ಕ: ಎಸ್‍ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ನೂರೇ ಅಜ್ಮೀರ್ ಮಜ್ಲಿಸ್ ಹಾಗೂ ಮಜ್ಲಿಸ್‍ನ್ನೂರ್ ವಾರ್ಷಿಕ ಕಾರ್ಯಕ್ರಮ ಮಾರ್ಚ್ 19ರಂದು ಪೇರಡ್ಕ ದರ್ಗಾ ಶರೀಫ್ ವಠಾರದಲ್ಲಿ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ ಎಂದು ಎಸ್ ಕೆ ಎಸ್ ಎಸ್ ಗೂನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 19ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಸುಮಾರು 5000ಕ್ಕೂ ಹೆಚ್ಚು ಮಂದಿ ಈ ಭಾಗವಹಿಸಲಿದ್ದಾರೆ ಎಂದು ಹೇಳಿದರು. ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಆನ್‍ಲೈನ್ ಮೂಲಕ ದಿನಂಪ್ರತಿ ನಡೆಯುತ್ತಿದ್ದು ಇದೊಂದು ಪ್ರಾರ್ಥನಾ ಸಂಗಮವಾಗಿದ್ದು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು ಎಸ್ ಕೆ ಎಸ್ ಎಸ್ ಎಫ್ ಸಂಘಟನೆಯ ಅಧೀನದಲ್ಲಿ ಬರುವ ವಿಕಾಯ, ಟ್ರೆಂಡ್, ಸೇರಿದಂತೆ ಉಪಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

5.30ಕ್ಕೆ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಯ್ಯದ್ ಜೈನುಲ್ ಅಬಿದೀನ್ ತಂಙಳ್ ಕುಂನ್ನುಂಗೈ ದುವಾ: ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ನೇತೃತ್ವವನ್ನು ಉಸ್ತಾದ್ ವಲಿಯುದ್ದೀನಿ ಫೈಝಿ ವಾಝಕ್ಕಾಡ್ ವಹಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪಂಡಿತರಾದ ಹುಸೈನ್ ದಾರಿಮಿ ರಂಜಿಲಾಡಿ, ರಿಯಾಜ್ ಫೈಝಿ ಎಮ್ಮೆಮಾಡು ಮೊದಲಾದ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಜ್ಲಿಸ್‍ನ್ನೂರ್ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ಗಂಟೆಗೆ ಸರಿಯಾಗಿ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ನೂರೇ ಅಜ್ಮೀರ್ ಕಾರ್ಯಕ್ರಮದ ಸ್ಟೇಟ್ ಕ್ಯಾಪ್ಟನ್ ಮುನೀರ್ ದಾರಿಮಿ, ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖಾ ಅಧ್ಯಕ್ಷ ಸಾಜಿದ್ ಅಝ್ಹರಿ, ಎಸ್‍ಕೆಎಸ್‍ಎಸ್‍ಎಫ್ ವಲಯ ಕಾರ್ಯದರ್ಶಿ ಅಕ್ಬರ್ ಕರಾವಳಿ, ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ಉಪ ಸಮಿತಿ ಕಾರ್ಯದರ್ಶಿ ಜುನೈದ್ ತೆಕ್ಕಿಲ್ ಉಪಸ್ಥಿತರಿದ್ದರು.

Similar News