×
Ad

ಮಾ.16ರಿಂದ ಎನ್‌ಐಟಿಕೆಯ ವಾರ್ಷಿಕ ಉತ್ಸವ 'ಇನ್ಸಿಡೆಂಟ್ -2023' ಕಾರ್ಯಕ್ರಮ

Update: 2023-03-14 19:08 IST

ಮಂಗಳೂರು, ಮಾ.14: ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ಯು ಮಾ.16 ರಿಂದ 19ರವರೆಗೆ ‌ಸಂಸ್ಥೆಯ ವಾರ್ಷಿಕ ಉತ್ಸವ ಇನ್ಸಿಡೆಂಟ್ 2023;ನ್ನು ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ನರೇಂದ್ರ ನಾಥ್ ಎಸ್ ತಿಳಿಸಿದ್ದಾರೆ.

ಅವರು ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡುತ್ತಾ, ಮಾ.16ರ ಸಂಜೆ 6ಕ್ಕೆ ಎನ್‌ಐಟಿಕೆ ಸಂಸ್ಥೆಯ ಸಿಲ್ವರ್ ಜುಬುಲಿ ಹಾಲ್‌ನಲ್ಲಿ ಇನ್ಸಿಡೆಂಟ್  -2023 ಉದ್ಘಾಟನೆಗೊಳ್ಳಲಿದೆ. ಇನ್ಸಿಡೆಂಟ್-2023 ಎಂಬುದು ಎನ್‌ಐಟಿಕೆಯ4 ದಿನಗಳ  ವಾರ್ಷಿಕ ಸಾಂಸ್ಕೃತಿಕ ಉತ್ಸವವಾಗಿದೆ. ಉತ್ಸವದಲ್ಲಿ ವಿವಿಧ ಕಲಾ ಪ್ರಕಾರಗಳು, ಕಾರ್ಯಕ್ರಮಗಳು, ಸ್ಫರ್ದೆಗಳು ಹಾಗೂ 25ಕ್ಕಿಂತ ಹೆಚ್ಚು ಸ್ಫರ್ದೆಗಳು ನಡೆಯಲಿದೆ. ದೇಶದ ವಿವಿಧ ಭಾಗದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ದೊಡ್ಡ ವೇದಿಕೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸುವರ್ಣ ಅವಕಾಶವಾಗಿದೆ.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಹಾಗೂ ಕ್ರೀಡಾ ವಿಭಾಗದ ಅಧಿಕಾರಿ ಡಾ.ಮನೋಜ್, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೈಷ್ಣವಿ ಹಾಗೂ ಇನ್ಸಿಡೆಂಟ್ -2023 ಸಂಚಾಲಕ ಸೂರ್ಯ ಕೌಶಿಕ್ ಬಿ.ಎನ್ ಉಪಸ್ಥಿತರಿದ್ದರು.

Similar News