ಓಟಿಗಾಗಿ ನಾಟಕ ಮಾಡುವುದನ್ನು ನಿಲ್ಲಿಸಿ: ಶಾಸಕ ಭರತ್‌ ಶೆಟ್ಟಿಗೆ ಇನಾಯತ್‌ ಅಲಿ ಕಿವಿಮಾತು

Update: 2023-03-15 07:00 GMT

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಮತ್ತು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕಾರ್ಯಕರ್ತರ ಸಮಾವೇಶವು ಮಂಗಳವಾರ ಕೈಕಂಬದ ಝಾರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಶಾಸಕ ಭರತ್‌ ಶೆಟ್ಟಿಯವರ 'ಬಾವಲಿ ತಿರುಗಾಟ' ಹೇಳಿಕೆಯ ವಿರುದ್ಧ ಕಿಡಿಕಾರಿದ್ದು, "ಭರತ್ ಶೆಟ್ರೇ, ನಿಮ್ಮ ಧರ್ಮವನ್ನು ಪಾಲನೆ‌‌ ಮಾಡಿ, ಇನ್ನೊಬ್ಬರ ಧರ್ಮವನ್ನು ಗೌರವಿಸು ಎಂದು ನನ್ನ ಧರ್ಮ ನನಗೆ ಹೇಳಿಕೊಟ್ಟಿದೆ. ಅದರಂತೆ ನಾನು ಪಾಲನೆ ಮಾಡುತ್ತಿದ್ದೇನೆ. ನೀವು ವೋಟಿಗಾಗಿ ನಾಟಕವಾಡುವುದನ್ನು ಬಿಟ್ಟು, ಅಭಿವೃದ್ಧಿಯ ಬಗ್ಗೆ ಮಾತನಾಡಿ" ಎಂದುಕಿವಿಮಾತು ಹೇಳಿದ್ದಾರೆ.

ನಾನು ಹೋಗುವ ಸಭೆ ಸಮಾರಂಭಗಳಲ್ಲಿ ಜನರು "ನೀನು ಮುಸ್ಲಿಮನೋ, ಬಿಲ್ಲವನೋ, ಬಂಟನೋ ಎಂದು ಕೇಳದೆ‌ ಸಹೋದರನಂತೆ ನನ್ನನ್ನು ಸ್ವೀಕರಿಸುತ್ತಿದ್ದಾರೆ. ಇದನ್ನು ನೋಡಿ ನಿಮ್ಮ ಹೊಟ್ಟೆ ಉರಿಯುತ್ತಿದೆ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ವೋಟಿಗಾಗಿ ಏನೇನೋ ನಾಟಕ ಮಾಡುತ್ತಿದ್ದೀರಿ. ನಿಮಗೆ ನಾಚಿಕೆ ಯಾಗಬೇಕು ಎಂದು ಇನಾಯತ್ ಅಲಿ ನುಡಿದರು. 

ಕೆ.ಎಸ್.ಈಶ್ವರಪ್ಪ ಏನೇನೋ ಮಾತನಾಡುತ್ತಾ ಇರುತ್ತಾರೆ. ಅವರ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ತಲೆಕೆಡಿಸಿಕೊಳ್ಳಬಾರದು. ಶೇ.40 ಕಮಿಷನ್‌ ಆಸೆಗಾಗಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವ ಅವರ ಮಾತನ್ನು ಯಾರೂ ಕೇಳುವವರಿಲ್ಲ ಎಂದು ಇನಾಯತ್ ಅಲಿ ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್‌ ಜಬ್ಬಾರ್‌, ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ವಿದ್ದಾಗ ಅಲಪ್‌ ಸಂಖ್ಯಾಥ ಸಮುದಾಯಕ್ಕೆ ಸರಕಾರದ ವತಿಯಿಂದ ನೀಡಲಾಗುತ್ತಿದ್ದ ಎಲ್ಲಾ ಯೋಜನೆಗಳನ್ನು  ಬಿಜೆಪಿ ಸರಕಾರ ನಿಲ್ಲಿಸಿದೆ. ಅವುಗಳನ್ನು ಮರಳಿ ಪಡೆಯಬೇಕೆಂದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದು ಅವರು ನುಡಿದರು.

ಸಮಾರಂಭದಲ್ಲಿ ಎಐಸಿಸಿಯ ಕರ್ನಾಟಕ ಕೋ-ಆಡಿನೇಟರ್‌ ಜಿನಲ್‌ ಗಾಲಾ, ರಾಜ್ಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಮಾಜಿ ಶಾಸಕರಾದ ಐವನ್ ಡಿಸೋಜ, ಮೊಯ್ದಿನ್‌ ಬಾವಾ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

ವೇದಿಕೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುದಬ್ಬಿರ್‌ ಅಹ್ಮದ್‌ ಖಾನ್‌, ಕೆಪಿಸಿಸಿ ಆಡಳಿತ ಪ್ರಧಾನ ಕಾರ್ಯದರ್ಶಿ ಇರ್ಷಾದ್‌ ಅಹ್ಮದ್‌ ಶೇಖ್‌, ಕೆಪಿಸಿಸಿ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಶಾಹುಲ್‌ ಹಮೀದ್‌ ಕದಿಕೆ, ಮುಹಮ್ಮದ್‌ ಸಿರಾಜ್‌, ಜಲೀಲ್ ಬದ್ರಿಯಾ, ಸಯ್ಯದ್ ಇಮ್ರಾಝ್‌, ಮಂಗಳೂರು ಉತ್ತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಮೀರ್ ಕಾಟಿಪಳ್ಳ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಷಾ ಗುರುಪುರ ಗಿರೀಶ್ ಆಳ್ವ, ಶಾಹುಲ್ ಹಮೀದ್, ಉಮೇಶ್‌ ದಂಡಕೇರಿ, ಪೃಥ್ವಿರಾಜ್‌ ಆರ್‌.ಕೆ., ಅಲ್ತಾಫ್‌, ಅಶ್ಫಾಕ್‌ ಉಲ್ಲಾ ಖಾನ್‌, ಗಣೇಶ್‌ ಪೂಜಾರಿ, ಆಲ್ವಿನ್‌ ಪ್ರಕಾಶ್‌, ಮುಹಮ್ಮದ್‌ ದಾವೂದ್‌, ರಿಹಾನ್‌ ಬಾನು, ರಝಿಯಾ ಸುಲ್ತಾನ, ಹರೀಶ್‌ ಬೈಕಂಪಾಡಿ, ಹಬೀಬುಲ್ಲಾ ಕೆಮ್ಮಾರ್‌, ಮುಹಮ್ಮದ್‌ ಮುಸ್ತಫಾ ಸುಳ್ಯ, ಪ್ರಸಾದ್‌ ಪಾಣಾಜೆ, ಗುಲ್ಝಾರ್‌ ಬಾನು, ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್‌ ಹಮೀದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರಹ್ಮಾನ್‌ ಖಾನ್‌ ಕುಂಜತ್ತಬೈಲ್‌ ಸ್ವಾಗತಿಸಿದರು. ನೌಫಲ್‌ ಕಾರ್ಯಕ್ರಮ ನಿರೂಪಿಸಿದರು.

Similar News