ಬೆಂಗಳೂರು: ಕಟ್ಟಡದ ಮೇಲಿಂದ ಬಿದ್ದು ಮಗು ಮೃತ್ಯು

Update: 2023-03-15 13:20 GMT

ಬೆಂಗಳೂರು, ಮಾ.15: ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು, ಮಗು ಸಾವನ್ನಪ್ಪಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6ನೆ ಕ್ರಾಸ್‍ನಲ್ಲಿ ನಡೆದಿದೆ. 

ವಿನಯ್ ಎಂಬುವರ ಪುತ್ರಿ ಒಂದೂವರೆ ವರ್ಷದ ದೀಕ್ಷಾ ಸಾವನ್ನಪ್ಪಿರುವ ಮಗು ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿಸುತ್ತಿದ್ದ ದೀಕ್ಷಾ ತಾಯಿ. ಆ ವೇಳೆ ಆಟವಾಡುತ್ತ ಗ್ರಿಲ್ಸ್ ಮೇಲೆ ಮಗು ಹತ್ತಿದೆ. ಬಳಿಕ ನೋಡ ನೋಡುತ್ತಿದ್ದಂತೆ ಜಾರಿ ಕೆಳ ಬಿದ್ದಿದ್ದು, ಆಸ್ಪತ್ರೆ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ ಎನ್ನಲಾಗಿದೆ.

ಈ ಸಂಬಂಧ ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Similar News