ಮಂಗಳೂರು : ರೆಡ್‌ಕ್ರಾಸ್ ವತಿಯಿಂದ ರೈಲ್ವೆ ನಿಲ್ದಾಣಕ್ಕೆ ಗಾಲಿಕುರ್ಚಿ ಕೊಡುಗೆ
ಮಂಗಳೂರು: ದ.ಕ.ಜಿಲ್ಲಾ ರೆಡ್‌ಕ್ರಾಸ್ ಘಟಕದ ವತಿಯಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಕೊಡುಗೆಯಾಗಿ ನೀಡಿದ ಮೂರು ಗಾಲಿಕುರ್ಚಿಗಳನ್ನು ಬುಧವಾರ ಹಸ್ತಾಂತರಿಸಲಾಯಿತು.
ಗಾಲಿಕುರ್ಚಿ ಹಸ್ತಾಂತರಿಸಿದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ರೆಡ್‌ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರಗಳನ್ನು ಆಯೋಜಿಸುವುದರ ಜತೆಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅಗತ್ಯ ಇರುವ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ರೆಡ್‌ಕ್ರಾಸ್ ನೆರವಾಗಲಿದೆ ಎಂದರು.
ರೈಲ್ವೆ ನಿಲ್ದಾಣದ ಡೆಪ್ಯುಟಿ ಸ್ಟೇಷನ್ ಮಾಸ್ಟರ್ ಕಿಶನ್ ಕುಮಾರ್.ಎಂ. ಮಾತನಾಡಿ ರೆಡ್‌ಕ್ರಾಸ್ ಘಟಕ ಕೊಡುಗೆಯಾಗಿ ನೀಡಿದ ಗಾಲಿಕುರ್ಚಿಯಿಂದ ಹಿರಿಯ ನಾಗರಿಕರಿಗೆ ಹಾಗೂ ಅಶಕ್ತರಿಗೆ ಪ್ರಯೋಜನವಾಗಲಿದೆ. ಮೂರು ಗಾಲಿಕುರ್ಚಿಗಳ ಪೈಕಿ ಒಂದನ್ನು ಉಳ್ಳಾಲ ರೈಲ್ವೆ ನಿಲ್ದಾಣಕ್ಕೆ ನೀಡಲಾಗುವುದು ಎಂದರು.
ರೈಲ್ವೆ ನಿಲ್ದಾಣದ ಕಮರ್ಶಿಯಲ್ ಸುಪರಿಂಟೆಂಡೆಂಟ್ ಶಜಹಾನ್, ಡಿಆರ್‌ಯುಸಿಸಿ ಸದಸ್ಯ ಎಂ.ಅಹ್ಮದ್ ಬಾವಾ, ದ.ಕ.ಜಿಲ್ಲಾ ರೆಡ್‌ಕ್ರಾಸ್ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ಆಡಳಿತ ಮಂಡಳಿ ನಿರ್ದೇಶಕರಾದ ಪಿ.ಬಿ.ಹರೀಶ್ ರೈ, ರವೀಂದ್ರನಾಥ ಉಚ್ಚಿಲ, ಸದಸ್ಯ ಅಬ್ಬಾಸ್ ಉಚ್ಚಿಲ ಉಪಸ್ಥಿತರಿದ್ದರು.