ಮಂಗಳೂರು ವಿ.ವಿ.ಯಲ್ಲಿ ಅರೆ ಭಾಷಾ ಅಕಾಡೆಮಿ ಸ್ಥಾಪನೆಗೆ ಸರಕಾರದಿಂದ 2 ಕೋಟಿ ರೂ. ಅನುದಾನ: ಪ್ರೊ. ಪಿ.ಎಸ್.ಯಡಪಡಿತ್ತಾಯ

Update: 2023-03-16 12:18 GMT

ಮಂಗಳೂರು: ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸರಕಾರ 2 ಕೋಟಿ ರೂ. ಅನುದಾನ ಒದಗಿಸಿದೆ ಎಂದು ಕುಲಪತಿ ಪ್ರೊ.ಪಿ. ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ಅವರು ಗುರುವಾರ ಮಂಗಳೂರು ವಿಶ್ವ ವಿದ್ಯಾನಿಲಯದ  ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2022-23ನೆ ಸಾಲಿನ ಶೈಕ್ಷಣಿಕ ಮಂಡಳಿಯ ಚತುರ್ಥ ಸಾಮಾನ್ಯ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾ ಡುತ್ತಿದ್ದರು.

ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕು, ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರ ಪೇಟೆ, ವೀರಾಜಪೇಟೆ,ಕಾಸರಗೋಡು ಜಿಲ್ಲೆಯ ಬಂದಡ್ಕ ಸೇರಿದಂತೆ ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಭಾಷೆಯ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಕುರಿತು ಸರ್ಕಾರದ ಆದೇಶ ನೀಡಿದೆ ಮತ್ತು  ಸಂಶೋಧನಾ ಕೇಂದ್ರ ದ ಸ್ಥಾಪನೆಗಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೇಲಿನ ಸರ್ಕಾರದ ಆದೇಶವನ್ನು ಅವಲೋಕಿಸಿ ಮಂಗಳೂರು ವಿಶ್ವವಿದ್ಯಾನಿ ಲಯದಲ್ಲಿ ಅರೆಭಾಷೆ ಅಧ್ಯಯನ ಕೇಂದ್ರದ ಸ್ಥಾಪನೆ ಸಂಬಂಧಿತವಾದ ಪ್ರಾರಂಭಿಕ ಕಾರ್ಯಗಳನ್ನು ನಡೆಸಲು, ಪರಿನಿಯಮ ರಚನೆ ಮತ್ತು ಚಟುವಟಿಕೆಗಳ ಯೋಜನೆ ರೂಪಿಸಲು ಅರಭಾಷೆ/ಕನ್ನಡ ಸಾಹಿತ್ಯದ ಕುರಿತು ಪ್ರಾವೀಣ್ಯತೆಯನ್ನು ಹೊಂದಿರುವ ಡಾ. ವಿಶ್ವನಾಥ ಬದಿಕಾನ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇವರನ್ನು ಪೀಠದ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.  ಕೇಂದ್ರದ ಸ್ಥಾಪನೆಗೆ ಸಂಬಂಧಿತವಾದ ಕರಡು ಪರಿನಿಯಮವನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿಂದು ಅನುಮೋದಿಸಲಾಯಿತು.

ಮುಂದಿನ ಹಂತದಲ್ಲಿ ಕುಂದಾಪುರ ಪ್ರದೇಶದಲ್ಲಿನ ಪ್ರಾದೇಶಿಕವಾಗಿ ಮಾತನಾಡುವ (ಕುಂದ ಕನ್ನಡ) ಕುಂದಾಪುರ ಕನ್ನಡ ಸಂಶೋಧನಾ ಕೇಂದ್ರ ಆರಂಭಿಸುವ ಗುರಿ ಹೊಂದಿರುವುದಾಗಿ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿಂದು ಸದಸ್ಯ ರೊಬ್ಬರು ಕೇಳಿದ ಪ್ರಶ್ನೆಗೆ ಪ್ರೊ.ಪಿ.ಎಸ್. ಯಡಪಡಿತ್ತಾಯ ಉತ್ತರಿ‌ಸಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲಾಗುವ ಸ್ನಾತಕೋತ್ತರ ಕಾರ್ಯಕ್ರಮಗಳೊಂದಿಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ಉದ್ಯೋಗ, ಮಾರು ಕಟ್ಟೆಗೂ ಉಪಯೋಗ ವಾಗುವಂತಹ ಕೋರ್ಸುಗಳನ್ನು  ಆಳವಡಿ ಸುವ ಸಂಬಂಧ ಸಮಿತಿಯನ್ನು ರಚಿಸಲಾಗಿದೆ ಸಮಿತಿಯು ಸಭೆ ನಡೆಸಿ ಕರಡು  ಮಾರ್ಗಸೂ ಚಿಯನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿಂದು ಅನುಮೋದಿ ಸಲಾಯಿತು.

*ಬಿ.ಕಾಂ  (ಬಿಸಿನೆಸ್ ಡಾಟಾ  ಅನಾಟಿಕ್ಸ್)ಹೊಸ  ಪದವಿ:-ರಾಷ್ಟ್ರೀಯ ಶಿಕ್ಷಣ ನೀತಿ 2020ರಂತೆ  ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮಟ್ಟದ ಹೊಸ ಬಿ.ಕಾಂ. (ಬಿಸಿನೆಸ್ ಡಾಟಾ ಅನಾಲಿಟಿಕ್ಸ್) ಕಾರ್ಯಕ್ರಮವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಸಂಯೋಜಿತ ಕಾಲೇಜಿನಿಂದಲೂ ಪ್ರಸ್ತಾವನೆ ಸ್ವೀಕೃತವಾಗಿರು ತ್ತದೆ, ಸದರಿ ಕಾರ್ಯಕ್ರಮ ವನ್ನು ಶೈಕ್ಷಣಿಕ ವರ್ಷ 2023-24 ಸಾಲಿಗೆ ಜಾರಿಗೆ ತರಲು ಅನುಕೂಲವಾಗುವಂತೆ ಬಿ.ಕಾಂ, (ಬಿಸಿನೆಸ್ ಡಾಟಾ ಅನಾಲಿಟಿಕ್ಸ್) ಕಾರ್ಯಕ್ರಮವನ್ನು ಸೇರ್ಪಡೆಗೊಳಿಸಿದ ಪಠ್ಯಕ್ರಮ ಮತ್ತು ವಿನಿಯಮವನ್ನು  ಶೈಕ್ಷಣಿಕ ಮಂಡಳಿ ಸಭೆ ಅನುಮೋದಿಸಿದೆ ಎಂದು ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ಮಂಗಳೂರು ವಿವಿಯಲ್ಲಿ  ಡಿ.ಲಿಟ್/ಡಿ.ಎಸ್ಸಿ ಪದವಿಗೆ ಸಂಬಂಧಿಸಿದ ಹಾಲಿ ಪರಿನಿಯಮಗಳನ್ನು ಉನ್ನತೀಕರಣ ಹಾಗೂ ಮಾರ್ಪಾಡು, ಎನ್‍ಇಪಿಯಡಿಯಲ್ಲಿ ಪದವಿ ಮಟ್ಟದ ಕನ್ನಡ ಭಾಷಾ ವಿಷಯದ ತೃತೀಯ ಸೆಮಿಸ್ಟರ್ ಪರಿಷ್ಕೃತ ಪಠ್ಯಕ್ರಮ ಹಾಗೂ ಐಚ್ಛಿಕ ಕೋರ್ಸಿನ ಪಠ್ಯಕ್ರಮದ ಅನುಮೋದನೆಯನ್ನು ನೀಡಲಾಯಿತು.  ಹಿಂದಿ ಭಾಷಾ ವಿಷಯದ ಮತ್ತು ಬಿಎ ಕಾರ್ಯಕ್ರಮದ ಹಿಂದಿ ಕೋರ್ಸಿನ ನಾಲ್ಕನೇ ಸೆಮಿಸ್ಟರ್ ಪಠ್ಯಕ್ರಮಕ್ಕೂ ಅನುಮೋದನೆ ಯನ್ನು ನೀಡಲಾಯಿತು. ಮಂಗಳೂರು ವಿವಿ ಉಪಕುಲಸಚಿವ/ ಸಮಾನ ವೃಂದದ ಹುದ್ದೆಗಳ ವೃಂದ ಮತ್ತು ನೇಮಕಾತಿ ವಿಧಾನ ಕುರಿತ ಕರಡು ನಿಯಮಗಳಿಗೆ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಯಿತು. ಕೌಶಲ್ಯವರ್ಧಕ ಕೋರ್ಸನ್ನು ಬೋಧಿಸಲು ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಯಿತು. ಬಿಎಸ್ಸಿ ( ಫ್ಯಾಶನ್ ಆಂಡ್ ಅಪಾರೆಲ್ ಡಿಸೈನ್) ಕಾರ್ಯಕ್ರಮವನ್ನು ಬದಲಾಯಿಸಿ ಇನ್ನು ಮುಂದೆ ಬಿಎಸ್ಸಿ ( ಫ್ಯಾಶನ್ ಡಿಸೈನ್) ಎನ್ನುವ ಹೆಸರನ್ನು ಅನುಮೋದಿಸಲಾಯಿತು.

ಸ್ನಾತಕೋತ್ತರ ಸಂಖ್ಯಾಶಾಸ್ತ್ರ ಕಾರ್ಯಕ್ ರಮದ ಪರಿಷ್ಕೃತ  ಪಠ್ಯಕ್ರಮದ ಅನು ಮೋದನೆ, ಸ್ನಾತಕೋತ್ತರ ತುಳು ಕಾರ್ಯ ಕ್ರಮದಲ್ಲಿ ಪರಿಷ್ಕೃತ ಪಠ್ಯಕ್ರಮದ ಅನುಮೋದನೆ, ಪಿಎಚ್‍ಡಿ ಕಾರ್ಯಕ್ರಮ ವನ್ನು ನಿಯಂತ್ರಿಸುವ ವಿನಿಯಮಕ್ಕೆ ಪೂರಕವಾಗಿ ತಯಾರಿಸಿರುವ ಮಾರ್ಗಸೂಚಿಗಳಿಗೆ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಯಿತು.

ಸಭೆಯಲ್ಲಿ ಕುಲಸಚಿವರಾದ ಡಾ.ಕಿಶೋರ್ ಕುಮಾರ್ (ಆಡಳಿತ) ರಾಜುಕೃಷ್ಣ ಚಲ್ಲಣ್ಣವರ್(ಪರೀಕ್ಷಾಂಗ) ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಉಪಸ್ಥಿತರಿದ್ದರು.

Similar News