​ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿ

Update: 2023-03-17 17:13 GMT


ಹೇಗ್, ಮಾ.17: ಉಕ್ರೇನ್‍ನಲ್ಲಿ ಯುದ್ಧಾಪರಾಧ ಎಸಗಿದ ಆರೋಪದಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಶುಕ್ರವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ.

ಉಕ್ರೇನ್ ಪ್ರದೇಶದಿಂದ ರಶ್ಯಕ್ಕೆ ಮಕ್ಕಳನ್ನು ಕಾನೂನು ಬಾಹಿರವಾಗಿ ಗಡೀಪಾರು ಮಾಡಿದ ಮತ್ತು ಜನರನ್ನು ಕಾನೂನುಬಾಹಿರವಾಗಿ ವರ್ಗಾಯಿಸಿದ ಆರೋಪದಲ್ಲಿ ಈ ವಾರಂಟ್ ಜಾರಿಯಾಗಿದೆ.

ಉಕ್ರೇನ್‍ನಲ್ಲಿ ಯುದ್ಧಾಪರಾಧ ಎಸಗಲಾಗಿದೆ ಎಂಬ ಆರೋಪದ ವಿಚಾರಣೆ ನಡೆಸುತ್ತಿರುವ ಐಸಿಸಿ, ಇದೇ ಆರೋಪದಲ್ಲಿ ರಶ್ಯದ ಮಕ್ಕಳ ಹಕ್ಕುಗಳ ಆಯೋಗದ ಕಮಿಷನರ್ ಮರಿಯಾ ಅಲೆಕ್ಸೆಯೆವ್ನಾರ ವಿರುದ್ಧವೂ ವಾರಂಟ್ ಜಾರಿಗೊಳಿಸಿದೆ. ಆದರೆ ರಶ್ಯವು ಐಸಿಸಿಯ ಸದಸ್ಯನಲ್ಲದ ಕಾರಣ ಈ ವಾರಂಟ್ ಅನ್ನು ಯಾವ ರೀತಿ ಜಾರಿಗೊಳಿಸಲಾಗುವುದು ಎಂಬುದು ಸ್ಪಷ್ಟವಾಗಿಲ್ಲ  ಎಂದು ಮಾಧ್ಯಮಗಳು ವರದಿ ಮಾಡಿವೆ.

Similar News