ಬಜಾಲ್: ಮಾ.19ರಂದು ಸಲಫಿ ಸಮ್ಮೇಳನ
Update: 2023-03-18 12:53 IST
ಮಂಗಳೂರು, ಮಾ.18: ಕರ್ನಾಟಕ ಸಲಫಿ ಅಸೋಸಿಯೇಶನ್ ಆಶ್ರಯದಲ್ಲಿ ಮಾ.19ರಂದು ಸಂಜೆ ಬಜಾಲ್ ಜಲ್ಲಿಗುಡ್ಡೆಯ ಕಟ್ಟಪುಣಿಯಲ್ಲಿ ಸಲಫಿ ಸಮ್ಮೇಳನ ಆಯೋಜಿಸಲಾಗಿದೆ.
ಸಂಜೆ 4ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಮುಜಾಹಿದ್ ಬಾಲುಶ್ಶೇರಿ, ಶಿಹಾಬ್ ಎಡಕ್ಕರ, ಶಾಕಿರ್ ಮದೀನಿ, ಡಾ.ಮುಹಮ್ಮದ್ ಹಫೀಝ್, ಇಜಾಝ್ ಸ್ವಲಾಹಿ, ಯಾಸಿರ್ ಅಲ್ ಹಿಕಮಿ, ಖಲೀಲ್ ತಲಪಾಡಿ ಮುಂತಾದವರು ವಿಷಯ ಮಂಡಿಸಲಿದ್ದಾರೆ.
ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರ್ನಾಟಕ ಸಲಫಿ ಅಸೋಸಿಯೇಶನ್ ಅಧ್ಯಕ್ಷ ಫಿರೋಝ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.