ಕಲ್ಲಾಪು: 'ಕರಾವಳಿ ಪ್ರಜಾಧ್ವನಿ' ಯಾತ್ರೆಗೆ ಚಾಲನೆ

Update: 2023-03-19 10:06 GMT

ಉಳ್ಳಾಲ: ಚುನಾವಣೆ ಪ್ರಣಾಳಿಕೆ ಮುಂದಿಟ್ಟುಕೊಂಡು ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಕಾರ್ಯಕ್ರಮಗಳ ಅಂಶಗಳನ್ನು ಜನರಿಗೆ ಮನದಟ್ಟು ಮಾಡಿ ಮತಯಾಚಿಸಲು ನಿರ್ಧರಿಸಿದ್ದೇವೆ. ಕರ್ನಾಟಕ ರಾಜ್ಯ ವನ್ನು ನಾಲ್ಕು ವಿಂಗಡನೆ ಮಾಡಲಾಗಿದೆ. ಈ ಪೈಕಿ ಕರಾವಳಿ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಹೆಜ್ಜೆ ಕಾಂಗ್ರೆಸ್ ಇಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಲ್ಲಾಪು ಯುನಿಟಿ ಹಾಲ್ ನಲ್ಲಿ ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ನ ಭಾಗ್ಯ, ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ಜೊತೆ ಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ಕಾಂಗ್ರೆಸ್ ನೀಡಲಿದೆ. ಜಿಎಸ್ ಟಿ  ಎನ್ನುವುದು ನಮ್ಮ ಸರ್ಕಾರ ಆಡಳಿತದಲ್ಲಿ ಇರಲಿಲ್ಲ. ಬಿಜೆಪಿ ಸರ್ಕಾರ ಎಲ್ಲದಕ್ಕೂ ತೆರಿಗೆ ಹಾಕುತ್ತಿದೆ. ಅಲ್ಲದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿದೆ. ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ  ಗೃಹ ಲಕ್ಷ್ಮಿ ಯೋಜನೆಯಯನ್ನು  ಕಾಂಗ್ರೆಸ್ ಜಾರಿ ಮಾಡಲಿದೆ ಎಂದರು.

ಪರೇಶ್ ಮೇಸ್ತಾ, ಶರತ್ ಮಡಿವಾಳ ಕೊಲೆ ಪ್ರಕರಣ ದಲ್ಲಿ ಕಾಂಗ್ರೆಸ್ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ದಲ್ಲಿದ್ದಾಗ ಮಾಡಲಾದ ಅಭಿವೃದ್ಧಿ ಕೆಲಸ ಅವರಿಂದ ಮಾಡಲು ಸಾಧ್ಯವಾಗಿಲ್ಲ.  ಚಾ ಮಾರುವವರು ಪ್ರಧಾನ ಮಂತ್ರಿ ಆಗಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ರೈಲ್ವೆ ನಿಲ್ದಾಣ ದಲ್ಲಿ ಚಾ ಮಾರುವವರು ಪ್ರಧಾನ ಮಂತ್ರಿ ಆಗಲು  ನಮ್ಮ ಸಂವಿಧಾನ ಕಾರಣ ಎಂದು ಎಲ್ಲರೂ ಅವರಿಗೆ ಹೇಳಬೇಕು ಎಂದು ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ, ಮಂಗಳೂರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಬಹಳಷ್ಟು ಮಂದಿ ಎಸ್ ಡಿಪಿಐ ನಿಂದ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಇದು ಪಕ್ಷದ ಬೆಳವಣಿಗೆಯ ಒಂದು ಹಾದಿಯಾಗಿದೆ. ಕೇಂದ್ರ ಸರ್ಕಾರ ದ ಯೋಜನೆ ಮತ್ತು ಯೋಚನೆ ಬಗೆ ಗಂಭೀರವಾಗಿ ಪರಿಗಣಿಸಿ ಅರ್ಥ ಮಾಡಿಕೊಳ್ಳಬೇಕು. ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ವಿಧಾನ ಸಭೆ ಉಪನಾಯಕ ಯು.ಟಿ.ಖಾದರ್ ಮಾತನಾಡಿ,  ಚುನಾವಣೆ ಹತ್ತಿರ ಬರುತ್ತಿರುವಂತೆ ಜಾಗೃತರಾಗಿರಬೇಕು. ಬೂತ್ ಮಟ್ಟದಲ್ಲಿ ಕಾರ್ಯ ಚಟುವಟಿಕೆ ಆಗಬೇಕು. ಐದು ವರ್ಷಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸ ಆಗಲಿಲ್ಲ. ನಾವು ಅಭಿವೃದ್ಧಿ ಕೆಲಸದ ಬಗ್ಗೆ ಗ್ಯಾರಂಟಿ ಕಾರ್ಡ್ ಈಗಾಗಲೇ ನೀಡುತ್ತೇವೆ.  ಸಾಮರಸ್ಯಕ್ಕೆ ಕುಂದು ತರುವ ಸರ್ಕಾರವನ್ನು ನಾವು ದೂರ ಇಡಬೇಕು ಎಂದು ಕರೆ ನೀಡಿದರು.

ರಾಜ್ಯ ದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಇಲ್ಲ, ಯುವಕರಿಗೆ ಉದ್ಯೋಗ ಇಲ್ಲ ದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರ ಒಬ್ಬನ ಕೈಯಲ್ಲಿ ಕೊಟ್ಟರೆ ಪರಿಸ್ಥಿತಿ ಅಧೋಗತಿಗೆ ತಲುಪಬಹುದು. ಬಿಜೆಪಿಯವರ ಭಿನ್ನ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳದೆ  ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ ಡಿಪಿಐ ಮುಖಂಡರಾದ ಅಶ್ರಫ್ ಕೆಸಿರೋಡ್ , ಝಿಯಾದ್ ಕೆ ಸಿನಗರ ಜೆಡಿಎಸ್ ನಿಂದ ಹೈದರ್ ಸಹಿತ ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಈ ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಜಿ.ಪಂ.ಸದಸ್ಯ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡ ಯೂಸುಫ್ ಉಳ್ಳಾಲ, ದೇವಕಿ ಉಳ್ಳಾಲ, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ  ನಾಸೀರ್ ಸಾಮಣಿಗೆ, ತಾ.ಪಂ.ಮಾಜಿ ಸದಸ್ಯರಾದ ಸುರೇಖಾ , ಮುಸ್ತಫಾ ಹರೇಕಳ, ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು,  ನಗರ ಸಭೆ ಅಧ್ಯಕ್ಷ ಚಿತ್ರ ಕಲಾ, ಸುರೇಶ್ ಭಟ್ನಗರ್, ಎನ್ ಎಸ್ ಕರೀಂ, ಭರತ್ ಮುಂಡೋಡಿ, ಶೌಕತ್ ಕೊಣಾಜೆ, ಉಳ್ಳಾಲ ನಗರ ಸಭೆ ಕಾಂಗ್ರೆಸ್ ಸದಸ್ಯರು,ಹಿಂದುಳಿದ ವರ್ಗ, ಮಹಿಳಾ ಘಟಕದ ಅಧ್ಯಕ್ಷ ಸದಸ್ಯರು, ಜಿಲ್ಲಾ ಮಟ್ಟದ ನಾಯಕರು, ತಾಲೂಕು ಮಟ್ಟದ ನಾಯಕರು , ಕ್ಷೇತ್ರ ವ್ಯಾಪ್ತಿಯ ನಾಯಕರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Similar News