ಕೆಜಿ ಹಳ್ಳಿ ಪ್ರಕರಣ: ಪಿಎಫ್‍ಐ ಕಾರ್ಯಕರ್ತರು ಸೇರಿ 15 ಜನರ ವಿರುದ್ಧ 10,196 ಪುಟಗಳ ಚಾರ್ಜ್‍ಶೀಟ್

Update: 2023-03-19 16:22 GMT

ಬೆಂಗಳೂರು, ಮಾ.19: ಕೆಜಿ ಹಳ್ಳಿಯ ಕಾನೂನು ಬಾಹಿರ ಚಟುವಟಿಕೆ ಪ್ರಕರಣ ಸಂಬಂಧ ಪಿಎಫ್‍ಐ ಕಾರ್ಯಕರ್ತರ ವಿರುದ್ಧ ಕೆಜಿ ಹಳ್ಳಿ ಠಾಣಾ ಪೊಲೀಸರು 10,196 ಪುಟಗಳ ಚಾರ್ಜ್‍ಶೀಟ್ ಅನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಯ(ಎನ್‍ಐಎ) ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 

ನಿಷೇಧಿತ ಪಿಎಫ್‍ಐ ಅಧ್ಯಕ್ಷ ನಾಸೀರ್ ಪಾಷಾ ಸೇರಿ 15 ಜನರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. 9 ಕಾರ್ಯಕರ್ತರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತೂರಿನಲ್ಲಿ ಫ್ರೀಡಂ ಚಾರಿಟೇಬಲ್ ಟ್ರಸ್ಟ್ ಎಂಬ ಹೆಸರಲ್ಲಿ ಸರಣಿ ಸಭೆ ನಡೆಸುತ್ತಿದ್ದರು. ಈ ಟ್ರಸ್ಟ್  ಗೆ ದೇಶದ ಹಲವೆಡೆಯಿಂದ 10 ವರ್ಷಗಳಲ್ಲಿ 4 ರಿಂದ 5 ಕೋಟಿ ಹಣ ಬಂದಿದೆ. ಬಂದ ಹಣವನ್ನು ಮಕ್ಕಳ ಶಿಕ್ಷಣ ಸೇರಿ ಹಲವು ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

Similar News