ಕರ್ನಾಟಕದಲ್ಲಿ ಪಿಎಂಎಂಎಸ್ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿದೆ: ಪುರುಷೋತ್ತಮ ರುಪಾಲಾ

Update: 2023-03-19 16:45 GMT

ಮಂಗಳೂರು: ರಾಜ್ಯ ದಲ್ಲಿ ಕೇಂದ್ರ ಸರಕಾರದ ಮೀನುಗಾರಿಕೆ ಸಚಿವಾಲಯದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುತ್ತಿದೆ ಇದಕ್ಕಾಗಿ ಕರ್ನಾಟಕ ಸರಕಾರ ಮತ್ತು ಸಚಿವ ರನ್ನು ಅಭಿನಂದಿಸುವುದಾಗಿ  ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರುಪಾಲಾ ತಿಳಿಸಿದ್ದಾರೆ.

ಅವರು ಇಂದು ನಗರದ ಟಿಎಂಎ ಪೈ ಸಭಾಂಗಣದಲ್ಲಿ ರವಿವಾರ ಸಾಗರ ಪರಿಕ್ರಮ (ಹಂತ -4)2023 ಕಾರ್ಯಕ್ರಮ ವನ್ನು ದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಸ್ವತಂತ್ರವಾದ ಮೀನುಗಾರಿಕೆ ಇಲಾಖೆ ಸಚಿವಾಲಯವನ್ನು ಸ್ಥಾಪಿಸಿ ರೂ. 20,050 ಕೋಟಿಯ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿ ಮಾಡಿದೆ. ಇದು ನಮ್ಮ ದೇಶದ ಮೀನುಗಾರಿಕೆ ಇತಿಹಾಸದ ಅತೀ ದೊಡ್ಡ ಯೋಜನೆಯಾಗಿದೆ. ಇದರಲ್ಲಿ ಮೀನುಗಾರಿಕೆಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ 12,340 ಕೋಟಿ ರೂ.ಗಳನ್ನು ಈ ಯೋಜನೆ ಯಡಿ ನೀಡಲಾಗಿದೆ ಎಂದು ಹೇಳಿದರು. ಕರ್ನಾಟಕ ಅತ್ಯಂತ ಸುಂದರವಾದ ಕರಾವಳಿ ತೀರವನ್ನು ಹೊಂದಿದೆ. ಇಲ್ಲಿನ ಮೀನುಗಾರಿಕೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಪರಿಹರಿಸಲು  ಗಮನಹರಿಸುವುದಾಗಿ ಸಚಿವರು ಭರವಸೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಾ, ಮಂಗಳೂರಿನಲ್ಲಿ ಸ್ವತಂತ್ರ ಮೀನುಗಾರಿಕಾ ಮಹಾ ವಿದ್ಯಾಲಯ ಸರಕಾರ ಮಂಜೂರು ಮಾಡಬೇಕು, ಮೀನುಗಾರಿಕೆಗೆ ಸೀಮೆಎಣ್ಣೆ ದೊರೆಯಬೇಕು ಎಂಬ ಮೀನುಗಾರರ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಕೇಂದ್ರ ಸಚಿವರ ಬಳಿ ಜನತೆಯ ಪರವಾಗಿ ಆಗ್ರಹಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ  ಕಾಮತ್ , ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಕೇಂದ್ರ ಸರಕಾರದ ಹಿರಿಯ ಅಧಿಕಾರಿ  ಗಳಾದ ಸಂಜಯ ಪಾಂಡೆ, ಕೃಷ್ಣಮೂರ್ತಿ, ಜಂಟಿ ಕಾರ್ಯ ದರ್ಶಿ ಡಾ.ಜಿ. ಬಾಲಾಜಿ, ಕೋಸ್ಟ್ ಗಾರ್ಡ್ ಡಿಜಿಪಿ ಡಿ.ಕೆ.ಶರ್ಮಾ, ಕರ್ನಾಟಕ ಸರಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ ಫಾಹಿಮ್, ಪುರುಷೋತ್ತಮ ರೂಪಾಲ ಅವರ ಪತ್ನಿ ಸವಿತಾ ಬೆನ್ ರೂಪಾಲ ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರಿ ಸ್ವಾಗತಿಸಿದರು.

Similar News