SSF ಕರ್ನಾಟಕ ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷ | ಮುಹಮ್ಮದ್ ಸಫ್ವಾನ್ ಪ್ರಧಾನ ಕಾರ್ಯದರ್ಶಿ

Update: 2023-03-20 04:01 GMT

ಮಂಗಳೂರು, ಮಾ.20: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (SSF) ರಾಜ್ಯ ಸಮಿತಿಯ 2023-2025ರ ಸಾಲಿನ ನೂತನ ಅಧ್ಯಕ್ಷರಾಗಿ ಹಾಫಿಝ್ ಮುಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಕೊಪ್ಪಳ ಆಯ್ಕೆಯಾಗಿದ್ದಾರೆ.

ಮಾ.18 ಮತ್ತು 19ರಂದು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಮಲ್ಜಅ್ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಖಿಯಾದ ಪ್ರತಿನಿಧಿ ಸಮಾವೇಶ ಹಾಗೂ ರಾಜ್ಯ ಕೌನ್ಸಿಲ್ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಹಾಗೂ ಕೋಶಾಧಿಕಾರಿಯಾಗಿ ಕೆ.ಎಂ.ಮುಸ್ತಫ ನಈಮಿ ಹಾವೇರಿ ಆಯ್ಕೆಯಾಗಿದ್ದಾರೆ.

ಮುಹಮ್ಮದ್ ಅಲಿ ತುರ್ಕಳಿಕೆ, ಜುನೈದ್ ಸಖಾಫಿ ಚಿತ್ರದುರ್ಗ, ಅನ್ವರ್ ಅಸ್‌ಅದಿ ಹಾಸನ, ಮುಜೀಬ್ ಕೊಡಗು, ಶಿಹಾಬ್ ಬೆಂಗಳೂರು, ಶರೀಫ್ ಬೆರ್ಕಳ ದಕ್ಷಿಣ ಕನ್ನಡ, ರಖೀಬ್ ಉಡುಪಿ, ಸಾದಾತ್ ಶಿವಮೊಗ್ಗ, ಸೈಯದ್ ಅತ್ಹರ್ ಸಖಾಫಿ ಲಕ್ಷ್ಮೀಶ್ವರ, ಉಬೈದುಲ್ಲಾ ಮಂಗಳೂರು, ಕೆ.ಕೆ.ಅಶ್ರಫ್ ಸಖಾಫಿ ದಾವಣಗೆರೆ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ, ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ನೂತನ ಸಮಿತಿಯನ್ನು ಘೋಷಿಸಿದರು. ಎಸ್ಸೆಸ್ಸೆಫ್ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದರು.

ಹುಸೈನ್ ಸಅದಿ ಕೆ.ಸಿ.ರೋಡ್, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಅಬ್ದುರ್ರಶೀದ್ ಝೈನಿ ಕಾಮಿಲ್, ಅಬ್ದುಲ್ ಹಮೀದ್ ಬಜ್ಪೆ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ವಂದಿಸಿದರು.

Similar News