ಮಂಗಳೂರು ಮನಪಾ ಕಚೇರಿ ಮುಂದೆ ಡಿಎಚ್‌ಎಸ್ ಪ್ರತಿಭಟನೆ

Update: 2023-03-20 16:57 GMT

ಮಂಗಳೂರು: ಅಳಪೆ ಉತ್ತರ ವಾರ್ಡಿನ ಕೊಡಕ್ಕಲ್ ಪ್ರದೇಶದ ದಲಿತ ಸಮುದಾಯಕ್ಕೆ ಸೇರಿದ ಲೀಲಾರವರ ಮನೆಯ ಎರಡೂ ಭಾಗದಲ್ಲಿ ಮಳೆನೀರು ಹರಿಯುವ ರಾಜಕಾಲುವೆಗೆ ತಡೆಗೋಡೆಯನ್ನು ಕೂಡಲೇ ನಿರ್ಮಿಸಿಕೊಡಬೇಕೆಂದು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಮನಪಾ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರತೀ ವರ್ಷವೂ ಸುರಿಯುವ ವಿಪರೀತ ಮಳೆಗೆ ರಾಜಕಾಲುವೆಗಳು ಭರ್ತಿಗೊಂಡು ಕೃತಕ ನೆರೆ ಉಂಟಾಗುತ್ತಿದೆ. ಕಳೆದ ವರ್ಷದ ಮಳೆಗೆ ಲೀಲಾರ ಮನೆ ಮುಳುಗಿದ್ದು, ಅಕ್ಕಪಕ್ಕದ ಮನೆಗಳಿಗೂ ಭಾರೀ ಹಾನಿ ಉಂಟಾಗಿತ್ತು. ಆ ಸಂದರ್ಭ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಮನಪಾ ಈವತ್ತಿನವರೆಗೂ ನಿರ್ಮಿಸಿಲ್ಲ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗದ ಕಾರಣ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಡಿಎಚ್‌ಎಸ್ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ಯೋಗೀಶ್ ಜಪ್ಪಿನಮೊಗರು, ಸುನಿಲ್ ಕುಮಾರ್ ಬಜಾಲ್, ಸಾಮಾಜಿಕ ಹೋರಾಟಗಾರರಾದ ಪ್ರಮೀಳಾ ದೇವಾಡಿಗ, ಆಸುಂತ ಡಿಸೋಜ, ಮಂಜುಳಾ ನಾಯಕ್, ಸಮರ್ಥ ಭಟ್, ಶೋಭಾ ಕೇಶವ ಪಡೀಲ್, ಕಾರ್ಮಿಕ ಮುಖಂಡರಾದ ಭಾರತಿ ಬೋಳಾರ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ರೇವಂತ್ ಕದ್ರಿ, ಶಾಹಿದ್ ಮತ್ತಿತರರು ಪಾಲ್ಗೊಂಡಿದ್ದರು.

Similar News