ಕಲ್ಲಾಪು: ರಾಸಾಯನಿಕ ಸಾಗಾಟದ ಟ್ಯಾಂಕರ್ ಪಲ್ಟಿ; ರಸ್ತೆ ಸಂಚಾರ ಅಸ್ತವ್ಯಸ್ತ

Update: 2023-03-21 17:20 GMT

ಮಂಗಳೂರು, ಮಾ.21: ನಗರದಿಂದ ಕೇರಳ ಕಡೆಗೆ ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ರಾ.ಹೆ.66 ರಲ್ಲಿ ಮಂಗಳವಾರ ರಾತ್ರಿ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ವರದಿಯಾಗಿದೆ.

ಚಾಲಕನ ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ ರಾ.ಹೆ.66ರ ಕಲ್ಲಾಪು ಹೆದ್ದಾರಿ ಮದ್ಯದಲ್ಲೇ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಟ್ಯಾಂಕರಿನಲ್ಲಿದ್ದ ರಾಸಾಯನಿಕ ಸೋರಿಕೆಯಾಗದಿದ್ದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಥಳೀಯರು ಹಾಗೂ ಸಂಚಾರ ಮತ್ತು ಉಳ್ಳಾಲ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಹಾಗಾಗಿ ರಾ.ಹೆ.ಯಲ್ಲಿ ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Similar News