ಬ್ರಾಂಡ್ ಬೆಂಗಳೂರಿನ ಖ್ಯಾತಿ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ: ಸಿಎಂ ಬೊಮ್ಮಾಯಿ

ಡಾ. ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

Update: 2023-03-23 16:08 GMT

ಬೆಂಗಳೂರು, ಮಾ.23: ನಾಡಪ್ರಭು ಕೆಂಪೇಗೌಡರ ಬೆಂಗಳೂರು ಸುಂದರವಾಗಿದೆ. ಬ್ರಾಂಡ್ ಬೆಂಗಳೂರಿನ ಹೆಸರು ಉಳಿಸುವುದು ಬಹಳ ಕಷ್ಟ, ಹಾಳು ಮಾಡುವುದು ಸುಲಭ. ಹೀಗಾಗಿ, ನಾವೆಲ್ಲ ಬ್ರಾಂಡ್ ನಗರದ ಹೆಸರನ್ನು ಉಳಿಸೋಣ. ಎಲ್ಲರ ಸಹಕಾರದಿಂದ ಬೆಂಗಳೂರಿಗೆ ಉತ್ತಮ ಹೆಸರು ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ಬಿಬಿಎಂಪಿ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪಂತರಪಾಳ್ಯದಲ್ಲಿ ನಿರ್ಮಿಸಿರುವ “ಡಾ. ಪುನೀತ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ” ಹಾಗೂ “ಅಭಿವೃದ್ಧಿಪಡಿಸಲಾಗಿರುವ ನಾಯಂಡಹಳ್ಳಿ ಕೆರೆ”ಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರು ಅದೃಷ್ಟವಂತರು ನಂಬಿದ ಜನರಿಗೆ, ವಿಶ್ವಾಸಕ್ಕೆ ನಿಷ್ಠೆಯಿಂದ 24 ಗಂಟೆಗಳ ಕಾಲ ಜನಸೇವೆ ಮಾಡುವ ಸೋಮಣ್ಣರವರು ನಿಜವಾದ ಜನನಾಯಕ. ರಾಜ್ಯದಲ್ಲಿ 3 ಲಕ್ಷ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ 5ಲಕ್ಷ ಮನೆ ನಿರ್ಮಿಸಲಾಗಿದೆ ಇದರ ಹಿಂದಿನ ಶಕ್ತಿ ಸೊಮಣ್ಣ. ಬೆಂಗಳೂರು ನಗರ ಬ್ರಾಂಡ್ ಬೆಂಗಳೂರು ಆಗಿದೆ, ವಿದೇಶದಲ್ಲಿಯೊ ಸಹ ನಗರ ಖ್ಯಾತಿ ಇದೆ. 7 ಸಾವಿರ ಸಿಸಿ ಕ್ಯಾಮರ ಮಹಿಳೆಯರಿಗೆ ಸುರಕ್ಷತೆಗಾಗಿ ನಗರದಾದ್ಯಂತ ಅಳವಡಿಸಲಾಗಿದೆ. ರಾಜಾಕಾಲುವೆ 1000 ಕೋಟಿ ಅನುದಾನ ಬೆಂಗಳೂರು ನಗರ ಅಭಿವೃದ್ದಿಗೆ 6500 ಕೋಟಿ ಅನುದಾನ ನೀಡಿದ್ದೇವೆ. ನಾಡಪ್ರಭು ಕೆಂಪೇಗೌಡರ ಬೆಂಗಳೂರು ಸುಂದರವಾಗಿದೆ. ಬ್ರಾಂಡ್ ಬೆಂಗಳೂರಿನ ಹೆಸರು ಉಳಿಸುವುದು ಬಹಳ ಕಷ್ಟ, ಹಾಳು ಮಾಡುವುದು ಸುಲಭ. ಹೀಗಾಗಿ, ನಾವೆಲ್ಲ ಬ್ರಾಂಡ್ ಬೆಂಗಳೂರಿನ ಹೆಸರನ್ನು ಉಳಿಸೋಣ. ಎಲ್ಲರ ಸಹಕಾರದಿಂದ ಬೆಂಗಳೂರಿಗೆ ಉತ್ತಮ ಹೆಸರು ಬರಲಿದೆ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಪುನೀತ್ ರಾಜ್‍ಕುಮಾರ್ ರವರ ಸ್ಮರಣೆಯಲ್ಲಿ ಪಂತರಪಾಳ್ಯ ಸುತ್ತಮುತ್ತಲ ನಿವಾಸಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸ್ಲಂ ಪ್ರದೇಶ, ಕಳ್ಳಕಾರರು ಪ್ರದೇಶವಾಗಿದ್ದ ಸ್ಥಳೀಯರ ಜನರ ಆಶೀರ್ವಾದದಿಂದ ಡಾ.ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ದಾಸರಹಳ್ಳಿಯಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರಿನಲ್ಲಿ 300 ಹಾಸಿಗೆ ಮತ್ತು ಪಂತರಪಾಳ್ಯದಲ್ಲಿ 205 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ನಟ ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡಿ, ಪುನೀತ್ ಅವರ ಹೆಸರಿನಲ್ಲಿ ಇಂಥ ಆಸ್ಪತ್ರೆಯನ್ನು ನಿರ್ಮಿಸಿದ ಸಚಿವ ಸೋಮಣ್ಣ ಅವರಿಗೆ ಧನ್ಯವಾದಗಳು. ಅಲ್ಲದೆ, ಪುನೀತ್ ರಾಜ್ ಕುಮಾರ್ ಅವರಿಗೆ ಅಣ್ಣನಾಗಿ ಇದ್ದೆ ಎಂಬುದೇ ಸಂತೋಷ. ಪುನೀತ್ ಡೊಡ್ಡತನ ಅದರಿಂದ ಅವನ ಮೇಲಿನ ಗೌರವ ಹೆಚ್ಚಾಗಿದೆ ಎಂದರು.

ಆರೋಗ್ಯ ಸಚಿವ ಕೆ.ಸುಧಾಕರ್, ಚಲನಚಿತ್ರ ನಿರ್ಮಾಪಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಆಸ್ಪತ್ರೆ ಮತ್ತು ನಾಯಂಡಹಳ್ಳಿ ಕೆರೆಯನ್ನು ಮುಖ್ಯಮಂತ್ರಿಗಳು ವೀಕ್ಷಣೆ ಮಾಡಿದರು.

Similar News