ಸುರತ್ಕಲ್: ಮನೆ ಮನೆಗೆ ತೆರಳಿ ಘನತ್ಯಾಜ್ಯ ವಿಲೇವಾರಿ

Update: 2023-03-24 16:10 GMT

ಸುರತ್ಕಲ್‌, ಮಾ.24: ಮಹಾ ನಗರ ಪಾಲಿಕೆಯ ಕಸ ವಿಲೇವಾರಿ ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಕಸವಿಕಲೇವಾರಿಯಾಗದೇ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಎಎಪಿ ಪಕ್ಷದ ವತಿಯಿಂದ ಕಸವಿಲೇವಾರಿ ಮಾಡಲಾಯಿತು.

ಪಕ್ಷದ ಮಂಗಳೂರು ಉತ್ತರ ಕ್ಷೇತ್ರದ ಸಂಭಾವ್ಯ ಎಎಪಿ ಅಭ್ಯರ್ಥಿ ಸಂದೀಪ್‌ ಶೆಟ್ಟಿ ಮತ್ತು ಸುರತ್ಕಲ್‌ ಬ್ಲಾಕ್‌ ಅಧ್ಯಕ್ಷ ಕಬೀರ್‌ ಕಾಟಿಪಳ್ಳ ನೇತೃತ್ವದಲ್ಲಿ ಕಾರ್ಯಕರ್ತರು ಸುರತ್ಕಲ್‌, ಕೃಷ್ಣಾಪುರ, ಕಾಟಿಪಳ್ಳ, ಹೊಸಬೆಟ್ಗಟು ಪರಿಸರದಲ್ಲಿ ಖಾಸಗಿ ವಾಹನದ ಮೂಲಕ ಮನೆ ಮನೆಗೆ ತೆರಳಿ ಕಸ ವಿಲೇವಾರಿ ಮಾಡಿದರು.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸುರತ್ಕಲ್‌ ಬ್ಲಾಕ್‌ ಅಧ್ಯಕ್ಷ ಕಬೀರ್‌ ಕಾಟಿಪಳ್ಳ, ಎಲ್ಲಾ ಪಕ್ಷಗಳು ಚುನಾವಣೆ ಗೆಲ್ಲುವ ಸಲುವಾಗಿ ಸಮಾವೇಶಗಳನ್ನು ಮಾಡುತ್ತಿವೆ. ಆದರೆ, ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸಂಭಾವ್ಯ ಅಭ್ಯರ್ಥಿ ಸಂದೀಪ್‌ ಶೆಟ್ಟ, ಮುಂದಿನ ರಾಷ್ಟೀಯ ಪಕ್ಷಗಳು ಜನರ ಸಮಸ್ಯೆ ಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಿವೆ ಎಂದು ಇಲ್ಲಿನ ಜನಸಾಮಾನ್ಯರು ಅರಿತು ಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಂಗಳೂರು ಉತ್ತರದಲ್ಲಿ ಆಪ್‌ ಗೆದ್ದು ಬಂದರೆ ರಾಷ್ಟ್ರೀಯ ಪಕ್ಷಗಳು ಸ್ಪಂದಿಸಲು ಹಿಂದೇಟು ಹಾಕುತ್ತಿರುವ ಇಂತಹಾ ಮೂಲಭೂತ ಸೌಕರ್ಯದ ಸಮಸ್ಯೆಗಳಿಗೆ ಪ್ರಥಮ ಆದ್ಯತೆಯ ಮೇರೆಗೆ ಸ್ಪಂದಿಸಲಿದೆ ಎಂದು ನುಡಿದರು.

ಜನರಿಗೆ ಏನೇನೋ ಟೊಳ್ಳು ಭರವಸೆಗಳನ್ನು ನೀಡುವ ಬದಲು ಆಪ್‌ ಜನ ಸಾಮಾನ್ಯರ ಮೂಲಭೂತ ಸೌಕರ್ಯಗಳ ಸಮಸ್ಯೆಗಳಾದ ರೀತಿಯಲ್ಲಿ ಆಡಳಿತ ನೀಡಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭ ಎಎಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

Similar News