ಸಂಸತ್ತಿನಿಂದ ರಾಹುಲ್ ಗಾಂಧಿ ಅನರ್ಹ ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

Update: 2023-03-25 13:51 GMT

ಉಳ್ಳಾಲ: ರಾಜಕೀಯ ದುರುದ್ದೇಶವಾಗಿ ಸಂವಿಧಾನಕ್ಕೆ ವಿರುದ್ಧವಾದ ಕಾನೂನುಗಳ ಜಾರಿ ಮಾಡಲಾಗುತ್ತಿದೆ, ಇನ್ನೊಂದೆಡೆ ದೇಶದ ಆಡಳಿತಗಾರರ ಧೋರಣೆ ವಿರುದ್ಧ ಮಾತನಾಡುವ ನಾಯಕರನ್ನೇ ಸಂಸತ್ತಿನಿಂದ ಹೊರಹಾಕುವ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ಧ ದೇಶದಾದ್ಯಂತ   ಜನಜಾಗೃತಿಯಾಗಬೇಕಿದೆ  ಎಂದು ಶಾಸಕ ಯು. ಟಿ. ಖಾದರ್ ಅಭಿಪ್ರಾಯಪಟ್ಟರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ  ಮತ್ತು ಕರ್ನಾಟಕ ಸರಕಾರದ ವಿರುದ್ಧ ತೊಕ್ಕೊಟ್ಟುವಿನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತನದಿಂದ ಅಮಾನತು ಗೊಳಿಸಿರುವ ವಿರುದ್ಧ ಹಾಗೂ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಮುಸ್ಲಿಂ 2ಬಿ ಅಲ್ಪಸಂಖ್ಯಾತ ಮೀಸಲಾತಿ ರದ್ದು ಗೊಳಿಸಿದೆ. ಇದರಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಅನ್ಯಾಯ ಆಗಿದೆ ಎಂದರು.                                                                                
ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಪ್ರಾತಿನಿಧ್ಯ ನೀಡಲು ದೇಶದಲ್ಲಿ ಮೀಸಲಾತಿ ಜಾರಿಗೊಳಿಸಲಾಗಿತ್ತು.  ಅಂತಹ ಸಾಂವಿಧಾನಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಿಜೆಪಿ ಇಂದು ಮುಂದಾಗಿದೆ. ಸ್ಥಳೀಯಾಡಳಿತಗಳ ಅಧ್ಯಕ್ಷ-ಉಪಾಧ್ಯಕ್ಷರುಗಳ ಮೀಸಲಾತಿಗಳಲ್ಲೂ  ಗೊಂದಲ ಉಂಟು ಮಾಡಿದೆ. ಇಂತಹ ಗೊಂದಲಗಳಿಂದಾಗಿ  ಹಿಂದುಳಿದವರ್ಗ, ಅಲ್ಪಸಂಖ್ಯಾತರು, ದಲಿತ ಸಮುದಾಯದ ವಿದ್ಯಾರ್ಥಿ ವೇತನ ಹಾಗೂ ಉದ್ಯೋಗಕ್ಕೂ ತೊಂದರೆಯುಂಟಾಗುತ್ತಿದೆ. ಬಿಜೆಪಿ ಆಡಳಿತದಿಂದ ಜನರನ್ನು ಮೋಸಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಭಾರತ್ ಜೋಡೋ ಯಾತ್ರೆ ಮೂಲಕ ದೇಶವನ್ನೇ ಒಗ್ಗಟ್ಟಾಗಿಸಿದ ಏಳಿಗೆಯನ್ನು ಸಹಿಸದ ಬಿಜೆಪಿ ಸರಕಾರ ಜನ ಆತ್ಮವಿಶ್ವಾಸವನ್ನು ಕುಗ್ಗಿಸುವ ಉದ್ದೇಶದಿಂದ ರಾಹುಲ್ ಗಾಂಧಿಯಂತಹ ಮಹಾನ್ ನಾಯಕರನ್ನು ಸಂಸತ್ತಿನಿಂದ ಹೊರಹಾಕುತ್ತಿದ್ದಾರೆ. ಸತ್ಯ, ಅನ್ಯಾಯದ ವಿರುದ್ಧ ಮಾತನಾಡುವವರ ವಿರುದ್ಧ ಕೆರಳುವ ಕೇಂದ್ರ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಜನಜಾಗೃತಿಗಳು ನಡೆಯಲಿದೆ ಎಂದು ಎಚ್ಚರಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಮಲಾರ್, ಸುರೇಶ್ ಭಟ್ನಗರ,  ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಎನ್. ಎಸ್. ಕರೀಂ, ಜಿಲ್ಲಾ ಹಿಂದುಳಿದ ವರ್ಗಗಳ ಪ್ರ. ಕಾರ್ಯದರ್ಶಿ ದಿನೇಶ್ ಕುಂಪಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಪ್ರ. ಕಾರ್ಯದರ್ಶಿ ಜೆಸಿಂತಾ ಡಿ.ಸೋಜಾ, ಅಲ್ಪಸಂಖ್ಯಾತ ಅಧ್ಯಕ್ಷ ಆಲ್ವಿನ್ ಡಿ.ಸೋಜಾ, ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಾಣಿಗೆ ಟಿ.ಎಸ್ ಉಳ್ಳಾಲ ನಗರಸಭಾ ಉಪಾಧ್ಯಕ್ಷ ಆಯೂಬ್ ಮಂಚಿಲ, ಮಾಜಿ ಅಧ್ಯಕ್ಷ ಬಾಝಿಲ್ ಡಿ.ಸೋಜಾ, ಸದಸ್ಯರಾದ ಮಹಮ್ಮದ್ ಮುಕ್ಜಚ್ಚೇರಿ, ಅಶ್ರಫ್, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ  ಮುಸ್ತಾಫ ಅಬ್ದುಲ್ಲಾ, ಮುಖಂಡರಾದ ಅಚ್ಯುತ್ತ ಗಟ್ಟಿ, ಮುರಳಿ ಮೋಹನ್ ಸಾಲಿಯಾನ್,  ಅಬ್ದುಲ್ ಸತ್ತಾರ್ ಸಿ.ಎಂ., ಧನಂಜಯ ಗಟ್ಟಿ, ರಾಜಾ ಬಂಡಸಾಲೆ, ಸಫೀಯಾ ಕೋಟೆಕಾರು, ಮನ್ಸೂರು ಉಳ್ಳಾಲ್ ಝಿಯಾದ್, ದಮಯಂತಿ, ಚಾಂದಿನಿ, ನಂದಿನಿ,  ವಾರಿಜ, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ರವಿ ಕಾಪಿಕಾಡು, ಪ್ರೇಮ್‍ನಾಥ್ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.

Similar News