ಪಜೀರ್: ನೂತನ ಒಂಬತ್ತು ರಸ್ತೆಗಳಿಗೆ ಶಿಲಾನ್ಯಾಸ

Update: 2023-03-26 11:01 GMT

ಮಂಗಳೂರು,ಮಾ.26: ಪಜೀರ್ ಗ್ರಾಮದ ಐದನೇ ವಾರ್ಡ್ ಪಾನೇಲ ಸಹಿತ ಒಟ್ಟು ಒಂಬತ್ತು ನೂತನ ರಸ್ತೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು.

ಮೊಯ್ದಿನ್ ಜುಮ್ಮಾ ಮಸೀದಿ ಪಾನೇಲ ಇದರ ಅಧ್ಯಕ್ಷ ಅಬ್ದುಲ್ ಖಾದರ್ ಪಾನೇಲ ಶಿಲಾನ್ಯಾಸಗೈದರು. ಈ ರಸ್ತೆಗಳಿಗೆ ಶಾಸಕ ಯು.ಟಿ ಖಾದರ್ ರವರ 50.30 ಲಕ್ಷ  ರೂ. ಅನುದಾನದಲ್ಲಿ ಕಾಮಗಾರಿ ನಡೆಯಲಿದೆ.

ಈ ಸಂದರ್ಭದಲ್ಲಿ ಪಜೀರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್, ಸದಸ್ಯರಾದ ಮೇರಿ ಫೆರ್ನಾಂಡಿಸ್ ಮೀನಾಕ್ಷಿ, ಕಾಂಗ್ರೆಸ್ ಪಜೀರ್ ವಲಯ ಅಧ್ಯಕ್ಷ ಯೂಸುಫ್, ಸ್ಥಳೀಯರಾದ ಇಬ್ರಾಹಿಂ, ಲತೀಫ್, ಪಾರೀಸ್ ರಾಜೇಶ್ ಪೂಜಾರಿ  ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಜೀರ್ ವಲಯ ಅಧ್ಯಕ್ಷ ಯೂಸುಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Similar News