ಬಿಎಸ್ಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ: ಕೊಳ್ಳೇಗಾಲ ಕ್ಷೇತ್ರದಿಂದ ಕಮಲ್ ನಾಗರಾಜ್ ಸ್ಪರ್ಧೆ

ವಿಧಾನಸಭಾ ಚುನಾವಣೆ

Update: 2023-03-28 14:36 GMT

ಬೆಂಗಳೂರು, ಮಾ.28: ಮುಂಬರುವ 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆ, ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ರಾಜ್ಯ ಉಸ್ತುವಾರಿ ಡಾ.ಅಶೋಕ್ ಸಿದ್ಧಾರ್ಥ ಉಪಸ್ಥಿತಿಯಲ್ಲಿ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಅಭ್ಯರ್ಥಿಗಳ ಮೊದಲ ಪಟ್ಟಿ: ಮಳವಳ್ಳಿ(ಎಸ್‍ಸಿ)-ಎಂ.ಕೃಷ್ಣಮೂರ್ತಿ, ಗುರುಮಿಠಕಲ್-ಕೆ.ಬಿ. ವಾಸು, ಮಧುಗಿರಿ-ಎನ್.ಮಧು, ತಿಪಟೂರು-ಜಿ.ಅಶ್ವಥ್ ನಾರಾಯಣ, ಚಾಮರಾಜನಗರ-ಹ.ರಾ.ಮಹೇಶ್, ಬೇಲೂರು-ಗಂಗಾಧರ್ ಬಹುಜನ್, ಆನೇಕಲ್(ಎಸ್‍ಸಿ)-ಚಿನ್ನಪ್ಪ ಚಿಕ್ಕಹಾಗಡೆ, ಸಿಂಧಗಿ-ಡಾ.ದಸ್ತಗಿರಿ ಮುಲ್ಲಾ.

ನಾಗಠಾಣಾ(ಎಸ್‍ಸಿ)-ಕಲ್ಲಪ್ಪ ಆರ್.ತೊರವಿ, ಕಲಬುರಗಿ ದಕ್ಷಿಣ-ಎಲ್.ಆರ್.ಬೋಸ್ಲೆ, ರಾಮದುರ್ಗ- ಸುನಂದ ಎನ್.ಎಚ್., ಯಲಹಂಕ-ಸಂದೀಪ್ ಮಾರಸಂದ್ರ ಮುನಿಯಪ್ಪ, ಅರಕಲಗೂಡು-ಹರೀಶ್ ಅತ್ನಿ, ಹುಮನಾಬಾದ್-ಅಂಕುಶ್ ಗೋಖಲೆ, ಕೊಳ್ಳೇಗಾಲ(ಎಸ್‍ಸಿ)-ಕಮಲ್ ನಾಗರಾಜ್, ಬೀದರ್ ದಕ್ಷಿಣ- ಕಪಿಲ್ ಗೋಡಬಲೆ, ಶಿರಹಟ್ಟಿ(ಎಸ್‍ಸಿ)-ದೇವೇಂದ್ರಪ್ಪ ಕಟ್ಟಿಮನಿ, ಕಲಬುರಗಿ ಗ್ರಾಮೀಣ(ಎಸ್‍ಸಿ)- ಮೈಲಾರಿ ಶಳ್ಳಗಿ.

ನೆಲಮಂಗಲ(ಎಸ್‍ಸಿ)-ಪಿ.ಮಹದೇವ್, ಮುದ್ದೇಬಿಹಾಳ್-ಕಾಶೀನಾಥ್ ದೊಡ್ಡಮನಿ, ಲಿಂಗಸನೂರು- ಅನಿಲ್ ಕುಮಾರ್, ಹಿರಿಯೂರು-ರಂಗಸ್ವಾಮಿ, ಮೂಡಿಗಡೆ(ಎಸ್‍ಸಿ)-ಎಲ್.ಬಿ.ರಮೇಶ್, ಔರಾದ್ (ಎಸ್‍ಸಿ)-ಗುಣವಂತ ಸೂರ್ಯಕಾಶಿ, ಟಿ.ನರಸೀಪುರ(ಎಸ್‍ಸಿ)-ಬಿ.ಆರ್.ಪುಟ್ಟಸ್ವಾಮಿ, ಹರಿಹರ- ಡಿ.ಹನುಮಂತಪ್ಪ ಸೇರಿದಂತೆ ಒಟ್ಟು 53 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.

Similar News