ಸಿ.ವೈ.ಸಿ ಕಾಟಿಪಳ್ಳ ಹಾಗೂ ಸಿ.ವೈ.ಸಿ ಗ್ಲೋಬಲ್ ವತಿಯಿಂದ ರಂಝಾನ್ ಕಿಟ್ ವಿತರಣೆ

Update: 2023-03-29 09:00 GMT

ಮಂಗಳೂರು,ಮಾ.29: ಕೆನರಾ ಯೂತ್ ಕೌನ್ಸಿಲ್ ಕಾಟಿಪಳ್ಳ ಹಾಗೂ ಸಿ.ವೈ.ಸಿ. ಗ್ಲೋಬಲ್ ಇದರ ವತಿಯಿಂದ ಪ್ರತಿವರ್ಷ ರಂಝಾನ್ ತಿಂಗಳಲ್ಲಿ ವಿತರಿಸಲಾಗುವ ರಂಝಾನ್ ಕಿಟ್ ವಿತರಣಾ ಸಮಾರಂಭ ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾಟಿಪಳ್ಳ ಮುಹ್ಯುದ್ದೀನ್ ಜುಮಾ ಮಸೀದಿಯ ಖತೀಬ್ ಬಹು. ಅಬ್ದುಲ್ ನಾಸರ್ ಮದನಿಯವರು ದುಆ ನೆರವೇರಿಸಿ, ಸಾಂಕೇತಿಕ ಕಿಟ್ ವಿತರಿಸಿ, ಶುಭ ಹಾರೈಸಿದರು. ಒಂದು ತಿಂಗಳಿಗಾಗುವ ಸಾಮಾಗ್ರಿಗಳನ್ನೊಳಗೊಂಡ ಸುಮಾರು 60 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ, ಸಿ.ವೈ.ಸಿ. ಗ್ಲೋಬಲ್ ಅಧ್ಯಕ್ಷ ನಕೀಝ್, ಸದಸ್ಯ ಆದಿಲ್, ಸಿ.ವೈ.ಸಿ.ಮಾಜಿ ಅಧ್ಯಕ್ಷರುಗಳಾದ ಹಬೀಬ್ ಕಾಟಿಪಳ್ಳ ಹಾಗೂ ಅಶ್ರಫ್ ತಾಜ್ ಫಿಶ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಸಿ.ವೈ.ಸಿ ಅಧ್ಯಕ್ಷ ನಾಸರ್ ಹಸನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರುಗಳಾದ ಮುಹಮ್ಮದ್ ಖಾಸಿಂ, ಆಸಿಫ್ ಮತ್ತಿತರರು ಉಪಸ್ಥಿತರಿದ್ದರು. ಸಂಚಾಲಕ ಸಲೀಂ ರಝಾಕ್ ಶ್ಯಾಡೊ ಸ್ವಾಗತಿಸಿ, ವಂದಿಸಿದರು.

Similar News