ವಿ.ಕೆ.ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನ 4ನೇ ಶೋರೂಂ ವಾಮಂಜೂರಿನಲ್ಲಿ ಶುಭಾರಂಭ

Update: 2023-03-30 09:48 GMT

ಮಂಗಳೂರು, ಮಾ.30: ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನ 4ನೇ ಶೋರೂಂ ನಗರ ಹೊರವಲಯದ ವಾಮಂಜೂರಿನಲ್ಲಿ ಸಂತ ಜೋಸಫ್ ಇಂಜಿನಿಯರಿಂಗ್ ಕಾಲೇಜಿನ ಎದುರುಗಡೆಯ ರಿಬ್ಕೊ ಕಾಂಪ್ಲೆಕ್ಸ್‌ನಲ್ಲಿ ಇಂದು ಶುಭಾರಂಭಗೊಂಡಿದೆ.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸಿದ್ದರು. 

ಅತಿಥಿಗಳಾಗಿ ಶಾಸಕ ಡಾ.ವೈ.ಭರತ್ ಶೆಟ್ಟಿ, ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಿಲ್ಫ್ರೆಡ್  ಪ್ರಕಾಶ್ ಡಿಸೋಜ, ವಾಮಂಜೂರು ಇಸ್ಲಾಹುಲ್ ಇಸ್ಲಾಂ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹೀಂ ಟಿ., ಮನಪಾ ಸ್ಥಾಯಿ ಸಮಿತಿಯ ಸದಸ್ಯೆ ಹೇಮಲತಾ ರಘು ಸಾಲ್ಯಾನ್, ಹೊಸ ದಿಗಂತ ಪತ್ರಿಕೆಯ ಸಿಇಒ ಪ್ರಕಾಶ್ ಪಿ.ಎಸ್., ಬಿಜೆಪಿ ವಕ್ತಾರ ಜಗದೀಶ್ ಶೇಣವ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.

ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನ ವಾಮಂಜೂರು ಮಳಿಗೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ವಿಠಲ, ನಿರ್ದೇಶಕಿ ವಿನುತಾ ವಿಠಲ ಕುಲಾಲ್ ಅತಿಥಿಗಳನ್ನು ಸ್ವಾಗತಿಸಿದರು. ಮಳಿಗೆಯ ಮಾರ್ಕೆಟಿಂಗ್ ಮ್ಯಾನೇಜರ್ ನಿಶಾಂತ್ ರಾಜ್ ವಂದಿಸಿದರು. ಮನೋಜ್ ಫೆರ್ನಾಂಡಿಸ್  ಕಾರ್ಯಕ್ರಮ ನಿರೂಪಿಸಿದರು.

ವಿ.ಕೆ.ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್‌ ಮಳಿಗೆಯು ನಗರದ ಯೆಯ್ಯಾಡಿ ಮತ್ತು ತೊಕ್ಕೊಟ್ಟು ಸಮೀಪದ ಕಲ್ಲಾಪು ಹಾಗೂ ಲೇಡಿಹಿಲ್‌ನಲ್ಲಿ ವಿ.ಕೆ. ಲಿಂಗ್ ಕಾನ್ಸೆಪ್ಟ್ ನಲ್ಲಿ ಜನಪ್ರಿಯವಾಗಿದೆ ಎಂದು ಮಳಿಗೆಯ ಜಿಎಂ ಸತೀಶ್ ಪೂಜಾರಿ ತಿಳಿಸಿದರು.

 ಶುಭಾರಂಭದ ಪ್ರಯುಕ್ತ ಮಾ.30ರಿಂದ ಎ.30ರವರೆಗೆ ಸಿಟ್, ಗ್ರೂಪ್, ವಿನ್ ಕೂಪನ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, 50,000 ರೂ, 30,000 ರೂ, 15,000 ರೂ. ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದವರು ವಿವರಿಸಿದರು.

ಸೋಫಾ ಮತ್ತು ಫರ್ನಿಚರ್ ತಯಾರಿಕೆಯಲ್ಲಿ ಪ್ರಸಿದ್ಧವಾದ ವಿ.ಕೆ.ಫರ್ನಿಚರ್ ಬ್ರಾಂಡ್, ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‌ರೂಂ ಸೆಟ್‌ಗಳು, ವಾರ್ಡ್ ರೋಬ್‌ಗಳು, ಬೆಡ್, ಡೈನಿಂಗ್ ಸೆಟ್ಸ್, ಸೋಫಾ ಸೆಟ್ಸ್, ಸ್ಟಡಿ ಟೇಬಲ್ಸ್ , ಮೊಡ್ಯುಲರ್ ಕಿಚನ್, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪ ಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘ ಬಾಳಿಕೆ ಬರುವ ಸೋಫಾ ಸೆಟ್ ಮುಂತಾದವುಗಳ ತಯಾರಿಕೆ ಮತ್ತು ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ಹೆಸರುವಾಸಿಯಾಗಿದೆ ಎಂದರು.

 ಬ್ರಾಂಡೆಡ್ ಉತ್ಪನ್ನಗಳಾದ ಸ್ಪೆಸ್‌ವುಡ್ ಬೆಡ್‌ ರೂಂ ಸೆಟ್ ಮತ್ತು ಫರ್ನಿಚರ್, ಎಕ್ಸ್‌ಕ್ಯೂಸಿವ್ ಡ್ಯುರೋಪ್ಲೆಕ್ಸ್‌ ಮ್ಯಾಟ್ರೆಸ್ ಮಳಿಗೆಯೂ ಇದಾಗಿದ್ದು ರಿಪೋಸ್ ಮತ್ತು ಇನ್ನಿತರ ಮ್ಯಾಟ್ರೆಸ್‌ಗಳು ಕೂಡಾ ಲಭ್ಯವಿವೆ. ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಾಯನ್ಸಸ್, ಮೊಬೈಲ್ಸ್, ಲ್ಯಾಪ್ ಟಾಪ್ಸ್, ಕಿಚನ್ ವೇ‌, ಕ್ರೋಕರೀಸ್, ಗೃಹಾಲಂಕಾರ ಹಾಗೂ ಇತರ ಸಾಮಗ್ರಿಗಳು  ಆಯ್ಕೆಗೆ ಉತ್ತಮ ಅವಕಾಶಗಳಿವೆ.

ಬಜಾಜ್ ಫೈನಾನ್ಸ್ ಎಚ್‌ಡಿಎಫ್‌ಸಿ, ಎಚ್.ಡಿ.ಬಿ. ಮತ್ತು ಐಡಿಎಫ್‌ಸಿ ಫೈನಾನ್ಸ್ ಸಹಾಯದಿಂದ ಯಾವುದೇ ನಗದು ಪಾವತಿಸದೆ, ಸುಲಭದ ಮಾಸಿಕ ಕಂತುಗಳಲ್ಲಿ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ.

ರಾಷ್ಟ್ರೀಯ ಮತ್ತು ಅಂತರ್‌ ರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್‌ ಕಂಪೆನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್ ಪೂಲ್, ಬಾಷ್ , ಐಎಫ್‌ ಬಿ ಗೋದ್ರೆಜ್, ಒ ಜನರ್ರಲ್, ಲಾಯ್ಡ್ ಹ್ಯಾವೆಲ್ಸ್ ಡೈಕಿನ್ ಮುಂತಾದ ಬ್ರಾಂಡ್‌ಗಳ ಗೃಹಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು , ಸ್ಯಾಮ್‌ಸಂಗ್, ನೋಕಿಯಾ, ವೊ, ಡೆಲ್, ಲೆನೊವೊ ಬ್ರಾಂಡುಗಳ ಮೊಬೈಲ್ ಫೋನ್ ಗಳು, ಲ್ಯಾಪ್‌ಟಾಪ್, ಕಂಪ್ಯೂಟ ರ್ ಮತ್ತಿತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ಇಲ್ಲಿ ದೊರೆಯಲಿದೆ ಎಂದು  ಅವರು ವಿವರಿಸಿದ್ದಾರೆ.

Similar News