ಅಕ್ರಮ ಅದಿರು ಸಾಗಣೆ ಆರೋಪ: ಖಾರದಪುಡಿ ಮಹೇಶ್‍ ಆಸ್ತಿ ಜಪ್ತಿ

Update: 2023-03-30 17:20 GMT

ಬೆಂಗಳೂರು, ಮಾ. 30: ಅಕ್ರಮ ಅದಿರು ಸಾಗಣೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಖಾರದಪುಡಿ ಮಹೇಶ್‍ಗೆ ಸಂಬಂಧಿಸಿದ 54.18 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಈಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಖಾರದಪುಡಿ ಮಹೇಶ್ ಸೇರಿ ಆತನ ಸಹೋದರರಿಗೂ ಸಂಬಂಧಿಸಿದ ಭೂಮಿ, ವಸತಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣ ಒಳಗೊಂಡತೆ 30 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಇದರ ಒಟ್ಟು ಮೌಲ್ಯ 54.18 ಕೋಟಿ ಮೌಲ್ಯ ಆಗಿದೆ ಎಂದು ಈಡಿ ತಿಳಿಸಿದೆ.

ಬಳ್ಳಾರಿ ಜಿಲ್ಲೆಯಿಂದ ಕಾರವಾರದ ಬೇಲೇಕೇರಿ ಬಂದರಿಗೆ ಅಕ್ರಮವಾಗಿ ಅದಿರು ರಫ್ತು ಪ್ರಕರಣ ಸೇರಿ, ಸಂಡೂರಿನ ರಾಮಗಢ ಪ್ರದೇಶದ ಅಸೋಸಿಯೇಟೇಡ್ ಮೆನಿಂಗ್ ಕಂಪೆನಿ (ಎಎಂಸಿ)ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ಖಾರದಪುಡಿ ಮಹೇಶ್ ಹಾಗೂ ಆತನ ಸಹೋದರರು ಇದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.

Similar News