ಫಾದರ್ ಮುಲ್ಲರ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ

ಸ್ವಯಂಚಾಲಿತ ಕೇಂದ್ರೀಯ ಪ್ರಯೋಗಾಲಯ ಉದ್ಘಾಟನೆ

Update: 2023-03-31 14:49 GMT

ಮಂಗಳೂರು: ಮಾನವೀಯತೆಯ ಕಾಳಜಿಯೊಂದಿಗಿನ ಮನುಕುಲದ ಅಭಿವೃದ್ಧಿಗೆ ವೈದ್ಯಕೀಯ ಸೇವೆ ಮುಖ್ಯ ಎಂದು ಮಲೇಶಿಯಾದ ಸಾಬಾ ಹೆಲ್ತಾ ಕೇರ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ದತುಕ್ ಹೆರಿಕ್ ಕೊರೈ ಯುವ ವೈದ್ಯರಿಗೆ ಕರೆ ನೀಡಿದರು.

ನಗರದ ಕಂಕನಾಡಿ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಶುಕ್ರವಾರ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಪದವಿ ಪ್ರದಾನ ಸಮಾರಂಭದಲ್ಲಿ  ಅವರು ಗೌರವ ಅತಿಥಿ ಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವೈದ್ಯಕೀಯ ವೃತ್ತಿಯಲ್ಲಿ, ಜ್ಞಾನ, ಕೌಶಲ್ಯ, ಅನುಭವ ಯಶಸ್ಸುಗಳಿಸಲು ಸಹಕಾರಿ. ನಿರಂತ ಓದು ಹೊಸ ಕೌಶಲ್ಯಗಳನ್ನು ರೂಡಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಫಾದರ್ ಮುಲ್ಲರ್ ಸಂಸ್ಥೆಯ ಅಧ್ಯಕ್ಷ ರೆವರಂಡ್ ಫಾದರ್ ಪೀಟರ್ ಪಾವ್ಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವ್ಯಕ್ತಿಯನ್ನು  ಗೌರವಿಸಿ,ವೃತ್ತಿ ನೈತಿಕತೆ, ಅನುಕಂಪದೊಂದಿಗೆ  ಮಾನವೀಯ ಯತೆಯೊಂದಿಗೆ ಸೇವೆ ಸಲ್ಲಿಸುವುದು ನಮ್ಮ ಗುರಿಯಾಗಿದೆ. ಜಗತ್ತಿನಲ್ಲಿ  ಜೀವ ಉಳಿಸುವುದಕ್ಕಿಂತ ಹೆಚ್ಚು ವೆಚ್ಚ ವನ್ನು ಜೀವ ನಾಶಕ ಆಯುಧಗಳನ್ನು ತಯಾರಿಸಲು ವೆಚ್ಚ ಮಾಡುತ್ತಿರುವುದು ಕಂಡಾಗ ವಿಷಾದವಾ ಗುತ್ತದೆ.ಯುವ ವೈದ್ಯರು ಜಗತ್ತಿನ ಜನರು ಉತ್ತಮ ರೀತಿಯಲ್ಲಿ ಬದುಕಲು ಸಹಾಯ ಮಾಡುವಂತರಾಗಬೇಕು. ಫಾದರ್ ಮುಲ್ಲರ್ ಸಂಸ್ಥೆ ಸೇವಾ ಸಂಸ್ಥೆ ಯಾಗಿ ಸ್ಥಾಪಕರಿಂದ ಸ್ಥಾಪನೆ ಯಾಗಿದೆ ಎಂದು ಯುವ ವೈದ್ಯರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಅಧ್ಯಕ್ಷ ರೆವರಂಡ್ ಫಾದರ್ ಪೀಟರ್ ಪಾವ್ಲ್ ಸಾಲ್ಡಾನಾ ಅಧ್ಯಕ್ಷತೆ ವಹಿಸಿದ್ಧರು ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲ ಯದ ಉಪಕುಲಪತಿ ಡಾ.ಎಂ.ಕೆ.ರಮೇಶ್ ಭಾಗವಹಿಸಿ ಮಾತನಾಡುತ್ತಾ,ವೈದ್ಯಕೀಯ ವೃತ್ತಿ ಪವಿತ್ರವಾದ ವೃತ್ತಿ ಈ ವೃತ್ತಿಯಲ್ಲಿ ವೃತ್ತಿ ಧರ್ಮದ ಪಾಲನೆಯೊಂದಿಗೆ ಪ್ರಮಾ ಣಿಕತೆ ನೈತಿಕತೆ ಯೊಂದಿಗೆ  ಕಾರ್ಯ ನಿರ್ವಹಿಸಿ. ಜೊತೆಗೆ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ವೈದ್ಯ ವೃತ್ತಿ ನಿರ್ವಹಿಸುವುದು ಮುಖ್ಯ ಎಂದು ಯುವ ವೈದ್ಯರಿಗೆ  ಶುಭ ಹಾರೈಸಿದರು.

ಸಮಾರಂಭದಲ್ಲಿ  157 ಮಂದಿಗೆ ಎಂಬಿಬಿಎಸ್ ಪದವಿ, 73 ಮಂದಿಗೆ ಎಂಡಿ ಹಾಗೂ ಎಂಎಸ್ ಪದವಿ, 40 ಮಂದಿಗೆ ಸ್ನಾತಕೋತ್ತರ ಫಿಸಿಯೋಥೆರಪಿ ಪದವಿ, 9 ಮಂದಿಗೆ ಮಾಸ್ಟರ್ ಫಿಸಿಯೋಥೆರಪಿ ಪದವಿ, 32 ಮಂದಿಗೆ ವಾಕ್ ಮತ್ತು ಶ್ರವಣ ಪದವಿ, 12 ಮಂದಿಗೆ ಆಡಿಯೋಲಜಿ ಸ್ನಾತಕೋತ್ತರ ಪದವಿ ಹಾಗೂ 12 ಮಂದಿಗೆ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಜಿಯಲ್ಲಿ ಸ್ನಾತ ಕೋತ್ತರ ಪದವಿ ಪ್ರದಾನ ಮಾಡಲಾ ಯಿತು.ಘಟಿಕೋತ್ಸವದಲ್ಲಿ ಒಟ್ಟು 435 ಪದವೀಧರರು ಪದವಿ ಪ್ರದಾನ ಮಾಡಲಾಯಿತು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಆಂತೋನಿ ಸಿಲ್ವನ್ ಡಿಸೋಜ ಮತ್ತು ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್  ಕಾಲೇಜಿನ ಪ್ರಾಂಶುಪಾಲೆ ಡಾ.ಹಿಲ್ಡಾ ಡಿಸೋಜ, ಫಾ.ಮುಲ್ಲರ್ ಕಾಲೇಜ್ ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜಿನ ಪ್ರಾಂಶು ಪಾಲ ಡಾ.ಅಖಿಲೇಶ್ ಪಿ.ಎಂ ವಾರ್ಷಿಕ ವರದಿ ವಾಚಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ಸ್ ಅಲೋಶಿಯಸ್ ಕುಯೆಲ್ಲೋ ಸ್ವಾಗತಿಸಿದರು. ವಂ.ಅಜಿತ್ ಮಿನೇಜಸ್ ವಂದಿಸಿದರು.ಪ್ರಿತಂ ತಾವ್ರೊ,ಶ್ರದ್ದಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಪೂರ್ವ ದಲ್ಲಿ ಸಂಪೂರ್ಣ ಸ್ವಯಂಚಾ ಲಿತವಾಗಿರುವ ಕೇಂದ್ರೀಯ ಪ್ರಯೋಗಾಲಯವನ್ನು  ಫಾದರ್ ಮುಲ್ಲರ್ ಸಂಸ್ಥೆಯ ಅಧ್ಯಕ್ಷ ರೆವರಂಡ್ ಫಾದರ್ ಪೀಟರ್ ಪಾವ್ಲ್ ಸಲ್ಡಾನಾ ಉದ್ಘಾಟಿ ಸಿದರು.

Similar News