×
Ad

ಮಂಗಳೂರು: ನಿಷೇಧಿತ ಇ-ಸಿಗರೇಟ್ ಮಾರಾಟ; ಪ್ರಕರಣ ದಾಖಲು

Update: 2023-03-31 21:34 IST

ಮಂಗಳೂರು, ಮಾ.31: ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊಹಿದ್ದೀನ್ ಸಿರಾಜ್ (44) ಎಂಬಾತ ನಗರದ ಲಾಲ್‌ಭಾಗ್ ಸಾಯಿಬೀನ್ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿರುವ ಶಾಪ್‌ನಲ್ಲಿ ವಿದೇಶಿ ಹಾಗೂ ಸ್ವದೇಶಿ ಸಿಗರೇಟ್‌ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಎಂದು ದೂರಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 6,280 ರೂ. ಮೌಲ್ಯದ ನಾನಾ ಕಂಪನಿಯ ವಿದೇಶಿ, ಸ್ವದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Similar News