ಅಂಗನವಾಡಿ ಕಾರ್ಯಕರ್ತೆಯರು /ಸಹಾಯಕ ಕಾರ್ಯಕರ್ತರ ಹುದ್ದೆಗೆ ಅಧಿಸೂಚನೆ ರದ್ದು

Update: 2023-04-03 15:37 GMT

ಬೆಂಗಳೂರು ನಗರ ಜಿಲ್ಲೆ,  ಏಪ್ರಿಲ್ 03 (ಕರ್ನಾಟಕ ವಾರ್ತೆ): ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ  ಶಿಶು ಅಭಿವೃದ್ದಿ ಯೋಜನೆಯಡಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಬರುವ 71 ಅಂಗನವಾಡಿ ಕಾರ್ಯಕರ್ತರ ಹುದ್ದೆ ಹಾಗೂ 80 ಅಂಗನವಾಡಿ ಸಹಾಯಕರ ಹುದ್ದೆಗಳಿಗೆ  ದಿನಾಂಕ 24.03.2023 ರಂದು  ಹೊರಡಿಸಿರುವ ಪ್ರಕಟನೆಯನ್ನು ರದ್ದುಗೊಳಿಸಲಾಗಿದೆ.

ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು ಬೆಂಗಳೂರು ರಾಜ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಬೆಂಗಳೂರು ರಾಜ್ಯ ಯೋಜನೆ, ಒಂದನೇ ಮಹಡಿ, ಬಿಬಿಎಂಪಿ ಕಟ್ಟಡ, ಹೇರಿಗೆ ಆಸ್ಪತ್ರೆ ಪಕ್ಕ, ಎನ್,ಆರ್, ಕಾಲೋನಿ, ಬೆಂಗಳೂರು ನಗರ, ಬೆಂಗಳೂರು-560004, ದೂರವಾಣಿ ಸಂಖ್ಯೆ- 080 26601917 ನ್ನು  ಸಂಪರ್ಕಿಸಬಹುದಾಗಿದೆ.

Similar News