ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಎಎಪಿ

Update: 2023-04-10 13:58 GMT

ಬೆಂಗಳೂರು, ಎ.10: ಆಮ್ ಆದ್ಮಿ ಪಾರ್ಟಿಯು ಮುಂಬರುವ ವಿಧಾನಸಭೆ ಚುನಾವಣೆಗೆ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ, ಎಎಪಿಯು ಅತಿಹೆಚ್ಚು ಅಭ್ಯರ್ಥಿಗಳನ್ನು ಘೊಷಣೆ ಮಾಡಿರುವುದು ಮಾತ್ರವಲ್ಲ, 168 ಕ್ಷೇತ್ರಗಳ ಜನತೆಗೆ ಒಂದು ಅತ್ಯುತ್ತಮ ಮತ್ತು ಪ್ರಾಮಾಣಿಕ ಆಯ್ಕೆಯನ್ನು ನೀಡಿದೆ ಎಂದು ಎಂದು ಎಎಪಿ ಮುಖಂಡ ಬ್ರಿಜೇಶ್ ತಿಳಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ತಿಳಿಯಲು ನಾವು ನೋಡಿರುವುದು ಅವರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯನ್ನೇ ಹೊರತು ಅವರ ಹಣಬಲ ಮತ್ತು ತೋಳ್ಬಲವನ್ನಲ್ಲ. ಮೂರೂ ಹಳೇ ಪಕ್ಷಗಳನ್ನು ನೋಡಿ, ಅವರ ಮೋಸ ಅನುಭವಿಸಿ ರಾಜ್ಯದ ಜನತೆಗೆ ಸಾಕಾಗಿದೆ, ಒಂದು ಸೂಕ್ತ ಪರ್ಯಾಯ ಬೇಕಾಗಿದೆ, ಅದನ್ನು ನೀಡಲು ಎಎಪಿ ಸಿದ್ದವಾಗಿದೆ ಎಂದರು.

ಒಟ್ಟು 168 ಅಭ್ಯರ್ಥಿಗಳ ಪೈಕಿ 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್‍ಗಳು, 5 ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು, 41 ಮಾಸ್ಟರ್ ಡಿಗ್ರಿ ಹೊಂದಿರುವ ಅಭ್ಯರ್ಥಿಗಳು ಮತ್ತು 82 ಪದವಿ ಹೊಂದಿರುವ ಅಭ್ಯರ್ಥಿಗಳಾಗಿದ್ದಾರೆ. 28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಪಕ್ಷದಿಂದ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಮಾಹಿತಿ ನಿಡಿದರು. 

Similar News