×
Ad

ಉದ್ನಾ -ಮಂಗಳೂರು ಜಂಕ್ಷನ್ ಡುವೆ ಬೇಸಿಗೆ ವಿಶೇಷ ರೈಲು ಸೇವೆ

Update: 2023-04-10 23:41 IST

ಮಂಗಳೂರು: ಬೇಸಗೆ ಕಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ಉದ್ನಾ (ಗುಜರಾತ್ ) ಮತ್ತು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳನ್ನು ಆರಂಭಿಸಸಲಾಗುತ್ತದೆ

ರೈಲು ಸಂಖ್ಯೆ.09057 ಉದ್ನ್ನಾ-ಮಂಗಳೂರು ಜಂಕ್ಷನ್ ವಿಶೇಷ ಸೇವೆಯು ಉದ್ನಾದಿಂದ  2023 ಎ.12ರಿಂದ ಜೂ.7ರ ತನಕ ಇರುತ್ತದೆ. ಎ.12ರಂದು 20:00 ಗಂಟೆಗೆ ಹೊರಟು  ಮರುದಿನ 19:40 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುಲಿದೆ .

ರೈಲು ಸಂಖ್ಯೆ.09058 ಮಂಗಳೂರು ಜಂಕ್ಷನ್-ಉದ್ನಾ ವಿಶೇಷ ಸೇವೆಯು ಮಂಗಳೂರು ಜಂಕ್ಷನ್‌ನಿಂದ ಎ.13ರಿಂದ 21:10 ಗಂಟೆಗೆ ಹೊರಡಲಿದೆ. ಮರುದಿನ 21.05 ಗಂಟೆಗೆ ಉದ್ನಾ  ತಲುಪಲಿದೆ. ರೈಲು ಓಡಾಟವು ಎ.13 ರಿಂದ  ಜೂ.8 ತನಕ ಇರುತ್ತದೆ.

ನಿಲುಗಡೆ: ವಲ್ಸಾದ್, ವಾಪಿ, ಪಾಲ್ಘರ್, ವಸಾಯಿ ರಸ್ತೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ರಾಜಾಪುರ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್, ಕರ್ಮಾಲಿ, ಮಡಗಾಂವ್, ಕ್ಯಾನಕೋನಾ, ಕಾರವಾರ, ಅಂಕೋಲಾ ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್.

ಕೋಚ್ ಸಂಯೋಜನೆ: ಪ್ರಥಮ ದರ್ಜೆ ಕಮ್ ಎಸಿ 2- ಟೈರ್ ಕೋಚ್- 1, ಎಸಿ 2- ಟೈರ್ ಕೋಚ್‌ಗಳು- 2, ಎಸಿ 3-ಟೈರ್ ಕೋಚ್‌ಗಳು -6, ಸ್ಲೀಪರ್ ಕ್ಲಾಸ್ ಕೋಚ್‌ಗಳು- 8, ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್‌ಗಳು-3, ಸೆಕೆಂಡ್ ಕ್ಲಾಸ್ ಕಮ್ ಲಗೇಜ್/ಬ್ರೇಕ್ ವ್ಯಾನ್ ಜೊತೆಗೆ ವಸತಿ ಸೌಲಭ್ಯ ದಿವ್ಯಾಂಗಜನ ಕೋಚ್ -1 ಮತ್ತು ಲಗೇಜ್ ಕಮ್ ಬ್ರೇಕ್ ವ್ಯಾನ್ ಕೋಚ್‌ಗಳು-1 ಎಂದು ರೈಲ್ವೆಯ  ಪ್ರಕಟನೆ ತಿಳಿಸಿದೆ.

Similar News