×
Ad

ಮಂಗಳೂರಿನ ಯುವತಿ ಥಾಯ್ಲೆಂಡ್‌ನಲ್ಲಿ ಮೃತ್ಯು

ಸ್ಕ್ಯೂಬಾ ಡೈವಿಂಗ್ ವೇಳೆ ನಡೆದ ದುರಂತ

Update: 2023-04-11 19:18 IST

ಮಂಗಳೂರು: ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವ ವೇಳೆ ಮಂಗಳೂರು ಮೂಲದ ಯುವತಿಯೊಬ್ಬರು ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ನಗರದ ಗೋರಿಗುಡ್ಡೆ ಹಿಲ್ ಸ್ಟೀಕ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಾಗಿದ್ದ ಓಷಿನ್ ಪಿರೇರಾ (28) ಮೃತಪಟ್ಟ ಯುವತಿ.

ಒಲಿವಿಯಾ ಪಿರೇರ - ದಿ. ಆಸ್ಕರ್ ಮಾರ್ಟಿನ್ ಪಿರೇರಾ ದಂಪತಿಯ ಪುತ್ರಿಯಾಗಿರುವ ಈಕೆ ನಗರದ ಸಂತ ಆಗ್ನೆಸ್ ಕಾಲೇಜು ಬಳಿಯ ‘ಮಂಗಳೂರು ಬೇಕಿಂಗ್ ಕಂಪನಿ ರೆಸ್ಟೋರಂಟ್ ಒಡತಿಯಾಗಿದ್ದರು.

ಎರಡು ದಿನಗಳ ಹಿಂದೆಯಷ್ಟೇ ಥಾಯ್ಲೆಂಡ್‌ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವಾಗ ಈ ದುರಂತ ಸಂಭವಿಸಿದೆ.

ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿ ಒಲಿವಿಯಾ ಪಿರೇರ ಸಂಬಂಧಿಕರ ಜೊತೆ ಮಂಗಳವಾರ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ. 

Similar News