×
Ad

ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 76 ಹೆಚ್ಚಳ

Update: 2023-04-12 23:11 IST

ಮಂಗಳೂರು, ಎ.12: ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ), ಇದು ರಾಜ್ಯದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, 2022-23ರ ಆರ್ಥಿಕ ವರ್ಷದಲ್ಲಿ 17,94,054 ಪ್ರಯಾಣಿಕರನ್ನು ನಿಭಾಯಿಸಲಾಗಿದ್ದು, ಹಿಂದಿನ ವರ್ಷಕ್ಕಿಂತ  ಶೇ. 76 ಬೆಳವಣಿಗೆಯನ್ನು ದಾಖಲಿಸಿದೆ.

2021-22ರಲ್ಲಿ ವಿಮಾನ ನಿಲ್ದಾಣವು 10,16,559 ಪ್ರಯಾಣಿಕರನ್ನು ನಿಭಾಯಿಸಿದೆ. ನಿರ್ವಹಿಸಿದ 17.94 ಲಕ್ಷ ಪ್ರಯಾಣಿಕರಲ್ಲಿ, 12.08 ಲಕ್ಷ ಪ್ರಯಾಣಿಕರು ದೇಶೀಯ ಮತ್ತು ಉಳಿದ 5.86 ಲಕ್ಷ ಪ್ರಯಾಣಿಕರು ಗಲ್ಫ್  ದೇಶಗಳಿಗೆ ತರಳಿದ್ದ ಪ್ರಯಾಣಿಕರು.

ಅಂತೆಯೇ  2022-23 ಅವಧಿಯಲ್ಲಿ 14,475 ವಿಮಾನಗಳ ಹಾರಾಟವನ್ನು  (ಎಟಿಎಂ)ನಿರ್ವಹಿಸಿದ ವಿಮಾನ ನಿಲ್ದಾಣವು ಇದರಲ್ಲಿ  ಶೇ. 42ರಷ್ಟು  ಬೆಳವಣಿಗೆಯನ್ನು ದಾಖಲಿಸಿದೆ. ಇವುಗಳಲ್ಲಿ 10,16,559 ದೇಶೀಯ ವಿಮಾನಗಳು, 4150 ಅಂತರ್‌ ರಾಷ್ಟ್ರೀಯ ಮತ್ತು 265 ಸಾಮಾನ್ಯ ವಿಮಾನಯಾನ (ಜಿಎ) ಅಥವಾ ಚಾರ್ಟರ್ಡ್ ಫ್ಲೈಟ್ ಹಾರಾಟವು ಸೇರಿವೆ.

2021-22ರಲ್ಲಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು 7,792 ದೇಶೀಯ, 2122 ಅಂತರ್‌ ರಾಷ್ಟ್ರೀಯ ಮತ್ತು ಉಳಿದ ಚಾರ್ಟರ್ಡ್ ಫ್ಲೈಟ್  ಸೇರಿದಂತೆ 10,212 ಎಟಿಎಂಗಳನ್ನು ನಿರ್ವಹಿಸಿದೆ. ಮಾರ್ಚ್ 2023ರಲ್ಲಿ ಫೆಬ್ರವರಿಗೆ ಹೋಲಿಸಿದರೆ ವಿಮಾನ ನಿಲ್ದಾಣವು ಪ್ರಯಾಣಿಕರ ದಟ್ಟಣೆಯಲ್ಲಿ ಶೇ. 7 ಬೆಳವಣಿಗೆಯನ್ನು ದಾಖಲಿಸಿದೆ. ಮಾರ್ಚ್‌ನಲ್ಲಿ 1,43,788 ಮತ್ತು ಫೆಬ್ರವರಿಯಲ್ಲಿ 1,34,583 ಪ್ರಯಾಣಿಕರನ್ನು ನಿರ್ವಹಿಸಿದೆ ಎಂದು ಪ್ರಕಟನೆ ತಿಳಿಸಿದೆ.

Similar News