×
Ad

ಕಾಜೂರು ದರ್ಗಾಕ್ಕೆ ಯು.ಟಿ ಖಾದರ್ ಭೇಟಿ

Update: 2023-04-17 22:59 IST

ಮಂಗಳೂರು: ವಿಧಾನ‌ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ‌ಮಾಜಿ‌ ಸಚಿವ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕರಾಗಿದ್ದ ಯು.ಟಿ ಖಾದರ್ ಅವರು ಸೋಮವಾರ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಶರೀಫ್ ಗೆ ಭೇಟಿ ಮಾಡಿ ದುಆ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ದರ್ಗಾಶರೀಫ್ ಕಚೇರಿಗೆ ಹಾಗೂ ಕಾಜೂರು ತಂಙಳ್ ಅವರನ್ನು ಭೇಟಿ ಮಾಡಿ ದುಆ ಆಶೀರ್ವಾದ ಪಡೆದರು.

ಈ ವೇಳೆ ದರ್ಗಾ ಕಮಿಟಿಯಿಂದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಜೆ.ಎಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ಸನ್ಮಾನಿಸಿ ಗೌರವ ಸಲ್ಲಿಸಿದರು. ಕಾಜೂರು ತಂಙಳ್ ಅವರೂ  ಖಾದರ್ ಅವರನ್ನು ಸನ್ಮಾನಿಸಿದರು.

Similar News