ಮಂಗಳೂರು: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ
ಮಂಗಳೂರು, ಎ.19: ಪಣಂಬೂರು, ಮಂಗಳೂರು, ಬಂಟ್ವಾಳ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಬೋರುಗುಡ್ಡೆಯ ಫಝಲ್ ಯಾನೆ ಮುಹಮ್ಮದ್ ಫಝಲ್ ಯಾನೆ ಪಚ್ಚು ಮಲ್ಲೂರು (32), ಅಡ್ಯಾರ್ ಪದವಿನ ಮುಹಮ್ಮದ್ ಅಶ್ರಫ್ ಯಾನೆ ಅಚ್ಚ (42), ಅರ್ಕುಳ ಗ್ರಾಮದ ವಳಚ್ಚಿಲ್ ಜರಿಗುಡ್ಡೆಯ ರೈಲ್ವೆ ಗೇಟಿನ ಬಳಿಯ ಮುಹಮ್ಮದ್ ಅಲ್ತಾಫ್ (26) ಬಂಧಿತ ಆರೋಪಿಗಳಾಗಿದ್ದಾರೆ.
ಫಝಲ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಕಂಕನಾಡಿ ನಗರ, ಮಂಗಳೂರು ಉತ್ತರ, ಬಜ್ಪೆ, ಬರ್ಕೆ ಠಾಣೆಗಳಲ್ಲಿ ಒಟ್ಟು 7 ಪ್ರಕರಣಗಳು, ಮುಹಮ್ಮದ್ ಅಶ್ರಫ್ ಮೇಲೆ ಮಂಗಳೂರು ಗ್ರಾಮಾಂತರದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
ಮುಹಮ್ಮದ್ ಅಲ್ತಾಫ್ ವಿರುದ್ಧ ಬರ್ಕೆ ಠಾಣೆಯಲ್ಲಿ 7, ಪಣಂಬೂರು ಮತ್ತು ಮಂಗಳೂರು ರೈಲ್ವೆ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.