×
Ad

ಮಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು ವಂಚನೆ

Update: 2023-04-19 22:34 IST

ಮಂಗಳೂರು: ತನ್ನನ್ನು ವೈದ್ಯೆ ಎಂದು ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯು 4.5 ಲಕ್ಷ ರೂ. ವಂಚನೆ ಮಾಡಿರುವುದಾಗಿ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಾ.21ರಂದು ಫೇಸ್‌ಬುಕ್‌ನಲ್ಲಿ  ಡಾ. ಕತ್ರೀನಾ ರೊಬರ್ಟ್ ಯು.ಕೆ.ಎಂಬ ಹೆಸರಿನ ಫ್ರೆಂಡ್ ರಿಕ್ವೆಸ್ಟ್ ತನಗೆ ಬಂದಿದ್ದು, ಅದನ್ನು ತಾನು ಸ್ವೀಕರಿಸಿ ಪರಸ್ಪರ ಚಾಟ್ ಮಾಡಿಕೊಂಡಿದ್ದೆ. ತನ್ನನ್ನು ಡಾಕ್ಟರ್ ಎಂದು ಪರಿಚಯಿಸಿ, ಭಾರತವನ್ನು ನೋಡಬೇಕು ಎಂದು ತಿಳಿಸಿದ ಮೇರೆಗೆ ವಾಟ್ಸ್‌ಆ್ಯಪ್ ನಂಬರ್ ಕೊಟ್ಟಿದ್ದೆ. ಎ.12ರಂದು ಆಕೆ ಭಾರತಕ್ಕೆ ಬರುವುದಾಗಿಯೂ ತಿಳಿಸಿದ್ದರು. ಅದರಂತೆ ಎ.12ರಂದು ದೂರವಾಣಿ ಕರೆಯೊಂದು ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ವಿಮಾನ ನಿಲ್ದಾಣದ ಅಧಿಕಾರಿ ಎಂದು ಪರಿಚಯಿಸಿ, ಡಾ. ಕತ್ರೀನಾ ರೊಬರ್ಟ್ ನಿಲ್ದಾಣದಕ್ಕೆ ಬಂದಿದ್ದು, ಅವರಲ್ಲಿ ಟ್ರಾವೆಲ್ ಚೆಕ್ ಇದೆ, ಪೇಮೆಂಟ್ ಮಾಡಲು ಹಣ ಇಲ್ಲ. ಹಣ ಪಾವತಿಸದಿದ್ದರೆ ಅವರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಲಾಗುತ್ತದೆ. ನೀವು ಅವರ ಗಾರ್ಡಿಯನ್ ಆಗಿರುವುದರಿಂದ ನೀವೇ ಹಣ ಪಾವತಿಸಬೇಕು. ಕತ್ರೀನಾ ಸ್ವದೇಶಕ್ಕೆ ಹೋದ ಮೇಲೆ ಹಣ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಬಳಿಕ ಹಣ ನೀಡಿ ಎಂದು ಒತ್ತಡ ಹೇರಿದ್ದಾನೆ. ನಂತರ ತಾನು ಆತ ನೀಡಿದ ಅಕೌಂಟ್‌ಗೆ 4.50 ಲಕ್ಷ ರೂ.ವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ಬಳಿಕ ವ್ಯಕ್ತಿ ಅಥವಾ ಮಹಿಳೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನಧಿಕೃತವಾಗಿ ಹಣ  ವರ್ಗಾಯಿಸಿಕೊಂಡ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

Similar News