×
Ad

ಮಂಗಳೂರು: ಪಾರ್ಟ್‌ಟೈಂ ಉದ್ಯೋಗದ ಆಮಿಷವೊಡ್ಡಿ ವಂಚನೆ

Update: 2023-04-20 22:33 IST

ಮಂಗಳೂರು, ಎ.20: ಪಾರ್ಟ್‌ಟೈಂ ಉದ್ಯೋಗ ನೀಡುವುದಾಗಿ ವಾಟ್ಸಪ್ ಸಂಖ್ಯೆಗೆ ಮೆಸೇಜ್ ಕಳುಹಿಸಿ ಬಳಿಕ ಒಂದೊಂದೇ ಟಾಸ್ಕ್ ನೀಡಿ ಹಣವನ್ನು ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿರ್ಯಾದಿದಾರರಿಗೆ ಫೆ.4ರಂದು ಮಧ್ಯಾಹ್ನ ಕಂಪೆನಿಯೊಂದರಲ್ಲಿ ಅರೆಕಾಲಿಕ ಕೆಲಸ ಇದೆಯೆಂದು 8412871317 ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ ಮೆಸೇಜ್ ಬಂದಿತ್ತು. ಇದನ್ನು ನಂಬಿದ ಫಿರ್ಯಾದಿದಾರರು  ಆ ಸಂಖ್ಯೆಯನ್ನು ಸಂಪರ್ಕಿಸಿದಾಗ ಅವರಿಗೆ ಟಾಸ್ಕ್ ನೀಡಲಾಯಿತು. ಅದನ್ನು ಪೂರ್ತಿಗೊಳಿಸಿದಾಗ ಹಂತ ಹಂತವಾಗಿ 240 ರೂ. ಮತ್ತು 2,232 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಿ ಮತ್ತೆ ಮುಂದಿನ ಟಾಸ್ಕ್ ನೀಡಲಾಯಿತು. ಹಂತ ಹಂತವಾಗಿ ಟಾಸ್ಕ್‌ನೊಂದಿಗೆ ಫೆ.4ರಿಂದ ಮಾ.10ರವರೆಗೆ ಫಿರ್ಯಾದಿಯ ಖಾತೆಯಿಂದ 5,66,664 ರೂ.ಗಳನ್ನು ವರ್ಗಾಯಿಸಿಕೊಳ್ಳಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News