×
Ad

ಮಂಗಳೂರು: ಐಸಿಐಸಿಐ ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ನಂಬಿಸಿ ವಂಚನೆ

Update: 2023-04-20 22:38 IST

ಮಂಗಳೂರು, ಎ.20: ಐಸಿಐಸಿಐ ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ನಂಬಿಸಿ ಫಿರ್ಯಾದಿಯ ಬ್ಯಾಂಕ್ ಖಾತೆಯಿಂದ 83,999 ರೂ. ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡು ವಂಚಿಸಿದ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿರ್ಯಾದಿದಾರರು ಐಸಿಐಸಿಐ ಕ್ರೆಡಿಟ್ ಕಾರ್ಡನ್ನು ಹೊಂದಿದ್ದು, ಅದರ ಸ್ಟೇಟ್‌ಮೆಂಟ್ ಪಡೆಯಲು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದಾಗ ಅದರಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಕ್ರೆಡಿಟ್ ಕಾರ್ಡ್‌ನ ಸ್ಟೇಟ್‌ಮೆಂಟ್ ಪಡೆಯಲು ಪ್ಲೇ ಸ್ಟೋರ್‌ನಲ್ಲಿ ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಡೌನ್‌ಲೋಡ್ ಮಾಡಿದ ತಕ್ಷಣ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 83,999 ರೂ. ಕಡಿತಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News