×
Ad

ದ್ವಿತೀಯ ಪಿಯುಸಿ ಫಲಿತಾಂಶ: ಕಲಾ ವಿಭಾಗದಲ್ಲಿ ತಬಸ್ಸುಮ್ ಶೇಖ್, ವಾಣಿಜ್ಯ ವಿಭಾಗದಲ್ಲಿ ಅನನ್ಯಾ ರಾಜ್ಯಕ್ಕೆ ಪ್ರಥಮ

ವಿಜ್ಞಾನ ವಿಭಾಗದಲ್ಲಿ ಕೌಶಿಕ್, ಸುರಭಿ ಸಾ‍ಧನೆ

Update: 2023-04-21 11:15 IST

ಬೆಂಗಳೂರು, ಎ.21: ಇದೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಜಯನಗರ NMKRV ಕಾಲೇಜು ವಿದ್ಯಾರ್ಥಿನಿ ತಬಸ್ಸುಮ್ ಶೇಖ್ 600ಕ್ಕೆ 593 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.

ತಬಸ್ಸುಮ್ ಶೇಖ್ ಬೆಂಗಳೂರಿನ ಜಯನಗರ ಎನ್ಎಂಕೆಆರ್ ವಿ ಮಹಿಳಾ ಕಾಲೇಜು ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. 

ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕೋಲಾರದ ಜ್ಞಾನಗಂಗೊತ್ರಿ ಕಾಲೇಜಿನ ಕೌಶಿಕ್ ಎಸ್, ಹಾಗೂ ಬೆಂಗಳೂರಿ ಆರ್ ವಿ ಪಿಯು ಕಾಲೇಜು ಸುರಭಿ ಎಸ್‌  596 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ.61.22, ವಾಣಿಜ್ಯ ವಿಭಾಗದಲ್ಲಿ ಶೇ.75.89, ವಿಜ್ಞಾನ ವಿಭಾಗದಲ್ಲಿ ಶೇ.85.71 ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ(ಶೇ.95) ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಪರಿಶೀಲಿಸುವುದು ಹೇಗೆ?

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ www.karresults.nic.in ಅಥವಾ https://kseab.karnataka.gov.in/ ಗೆ ಭೇಟಿ ನೀಡಿ.

ಓಪನ್‌ ಆದ ಪೇಜ್‌ನಲ್ಲಿ 2nd ಪಿಯುಸಿ ಫಲಿತಾಂಶಕ್ಕೆ ಸಂಬಂಧಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
ಆಗ ನಿಮಗೆ ಇನ್ನೊಂದು ಪೇಜ್‌ ಓಪನ್‌ ಆಗುತ್ತದೆ.

ಆ ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್‌ ಟೈಪ್‌ ಮಾಡಿ.
ನಂತರ 'Submit' ಎಂಬಲ್ಲಿ ಕ್ಲಿಕ್ ಮಾಡಿ.

ಆಗ ನಿಮಗೆ ನಿಮ್ಮ ಫಲಿತಾಂಶ ಪ್ರದರ್ಶನವಾಗುತ್ತದೆ.

ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ ತೆಗೆದುಕೊಳ್ಳಿ.

Similar News